Breaking News

ನಟ ದರ್ಶನ್ ಗೆ 5 ವರ್ಷ ನಿಷೇಧ ಹೇರಿ: ಫಿಲ್ಮಂ ಚೇಂಬರ್ ಗೆ ಮಾನವಹಕ್ಕುಗಳು, ಭ್ರಷ್ಟಚಾರ ನಿಗ್ರಹದಳದಿಂದ ದೂರು

Spread the love

ಬೆಂಗಳೂರು :ಕಳೆದ ಕೆಲವು ದಿನಗಳಿಂದ ಸ್ಯಾಂಡಲ್ವುಡ್ ನಟ ದರ್ಶನ್ ಅವರ ವಿರುದ್ಧ ಸಾಲಕ್ಕೆ ಶ್ಯೂರಿಟಿ ಪ್ರಕರಣ ಹಾಗು ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವಿನ ಆರೋಪ-ಪ್ರತ್ಯಾರೋಪಗಳು ಕನ್ನಡ ಚಿತ್ರರಂಗದಲ್ಲಿ ಬೇಸರ ಮೂಡಿಸಿದೆ. ಈ ಕುರಿತಾಗಿ ಇಂದು ಮಾನವ ಹಕ್ಕುಗಳು ಮತ್ತು ಭ್ರಷ್ಟಚಾರ ನಿಗ್ರಹದಳ ಸಂಸ್ಥೆಯ ಅಧ್ಯಕ್ಷ ಮೋಹನ್ ಅವರ ನಿಯೋಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ನಟನಿಗೆ ಐದು ವರ್ಷಗಳ ಕಾಲ ನಿಷೇಧ ಹೇರುವಂತೆ ಆಗ್ರಹಿಸಿ ಸೂಕ್ತ ಕ್ರಮಕ್ಕೆ ದೂರು ನೀಡಿದರು.ದರ್ಶನ್ ಮಾತಿಗೆ ಕಡಿವಾಣ ಹಾಕಬೇಕು. ಅವರ ಅಸಭ್ಯ ವರ್ತನೆ ಕನ್ನಡ ಚಿತ್ರರಂಗವನ್ನು ಹಾಳು ಮಾಡುತ್ತಿದೆ.

ನಾಡಿನ ಯುವ ಸಮೂಹವನ್ನು ದಿಕ್ಕು ತಪ್ಪಿಸುವ ಅವರು ಕೊಲೆಗಡುಕರಾಗಲು ಪ್ರೇರೇಪಣೆ ನೀಡುತ್ತಿದ್ದಾರೆ ಎಂದು ಸಲ್ಲಿಸಲಾದ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಸಮಾಜದ ಮೇಲೆ ದುಷ್ಪರಿಣಾಮ ಬೀರುವಂತೆ ಅಸಭ್ಯವಾಗಿ ಮಾಧ್ಯಮದ ಮುಂದೆ ಸಾರ್ವಜನಿಕವಾಗಿ ನಡೆದುಕೊಳ್ಳುತ್ತಿರುವ ದರ್ಶನ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಬ್ಬರನ್ನೂ ಚಲನಚಿತ್ರ ರಂಗದಿಂದ ಬಹಿಷ್ಕರಿಸಬೇಕು. ಅವರು ಯಾವುದೇ ರೀತಿಯ ಸಿನಿಮಾ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.


Spread the love

About Laxminews 24x7

Check Also

ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕದ 47ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಆಲಮಟ್ಟಿ ಸ್ವಾಮಿಗಳು

Spread the love ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕದ 47ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಆಲಮಟ್ಟಿ ಸ್ವಾಮಿಗಳು ಅಮೆರಿಕಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ