Breaking News

ಬಾಯಿ ಮುಚ್ಚಿಸಿಕೊಂಡು ಇದ್ದರೆ ಎಲ್ಲ ಸರಿಹೋಗುತ್ತೆ : ಈಶ್ವರಪ್ಪ ಗರಂ

Spread the love

ಶಿವಮೊಗ್ಗ : ಕೇಂದ್ರೀಯ ನಾಯಕರು ತೆಗೆದುಕೊಂಡ ತೀರ್ಮಾನಕ್ಕೆ ಬದ್ಧ ಅಂತಾ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇದರಿಂದ ಯತ್ನಾಳ್ ಸೇರಿದಂತೆ ಯಾರು ಮಾತನಾಡದೆ ಬಾಯಿ ಮುಚ್ಚಿಸಿಕೊಂಡು ಇದ್ದರೆ ಎಲ್ಲವೂ ಸರಿಯಾಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸದ್ಯ ರಾಜಕೀಯ ಬೆಳವಣಿಗೆ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಕರ್ನಾಟಕದಲ್ಲಿ ಏನು ಮಾಡಬೇಕೆಂದು ರಾಷ್ಟ್ರೀಯ ನಾಯಕರುಗಳು ಒಂದು ತೀರ್ಮಾನ ತೆಗೆದುಕೊಂಡಿದ್ದರು. ಪಕ್ಷದ ರಾಷ್ಟ್ರೀಯ ನಾಯಕ ಅರುಣ್ ಸಿಂಗ್ ಬಂದು ಎಲ್ಲರ ಅಭಿಪ್ರಾಯ ಪಡೆದು ರಾಷ್ಟ್ರೀಯ ನಾಯಕರ ಗಮನಕ್ಕೆ ತಂದರೂ ಸಹ ತಲಾ ಒಬ್ಬೂಬ್ಬರು ಮಾತನಾಡುವುದು ಸರಿಯಲ್ಲ. ಇದು ಸರ್ಕಾರಕ್ಕೂ ಮತ್ತು ಪಕ್ಷಕ್ಕೂ ಒಳ್ಳೆಯದಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಯತ್ನಾಳ್ ವಿರುದ್ಧ ಕಿಡಿಕಾರಿದ ಈಶ್ವರಪ್ಪ, ನಿನ್ನೆ ಅನೇಕ ಸ್ವಾಮಿಜೀಗಳು ಯಡಿಯೂರಪ್ಪರನ್ನು ಭೇಟಿ ಮಾಡಿದ್ದರು. ಈ ವೇಳೆ ಕೇಂದ್ರೀಯ ನಾಯಕರು ತೆಗೆದುಕೊಂಡ ತೀರ್ಮಾನಕ್ಕೆ ಬದ್ಧ ಅಂತಾ ಅವರು ತಿಳಿಸಿದ್ದಾರೆ. ಇದರಿಂದ ಯತ್ನಾಳ್ ಸೇರಿದಂತೆ ಯಾರು ಮಾತನಾಡದೆ ಬಾಯಿ ಮುಚ್ಚಿಸಿಕೊಂಡು ಇದ್ದರೆ ಎಲ್ಲವೂ ಸರಿಯಾಗುತ್ತದೆ. ಇವತ್ತು ಅಸಮಾಧಾನ ಇರುವವರು ಪಕ್ಷದ ಮೇಲೆ ಗೌರವವಿದ್ರೆ ಮುಂದೆ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಗೊಂದಲಗಳನ್ನು ದಯವಿಟ್ಟು ಮಾಡಬೇಡಿ ಎಂದು ಮನವಿ ಮಾಡಿಕೊಂಡರು.


Spread the love

About Laxminews 24x7

Check Also

ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕದ 47ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಆಲಮಟ್ಟಿ ಸ್ವಾಮಿಗಳು

Spread the love ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕದ 47ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಆಲಮಟ್ಟಿ ಸ್ವಾಮಿಗಳು ಅಮೆರಿಕಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ