Breaking News

ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್​ ಯಡಿಯೂರಪ್ಪರನ್ನು ತೆಗೆಯುತ್ತಾರೆ ಎಂದು ಮೊದಲೇ ಹೇಳಿದ್ದೇ. ನಾನು ಹೇಳಿದ್ದು ನೀವು ಯಾರು ನಂಬಲಿಲ್ಲ

Spread the love

ಬೆಂಗಳೂರು: ಸಿಎಂ ಯಡಿಯೂರಪ್ಪ ಬದಲಾವಣೆ ಬಗ್ಗೆ ಮೊದಲೇ ಮಾಹಿತಿ ಇತ್ತು ಎಂದ ಸಿದ್ದರಾಮಯ್ಯ ಹೇಳಿದ್ದೇನು?
ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನು ಕೆಳಗಿಳಿಸುತ್ತಿರುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್​ ಯಡಿಯೂರಪ್ಪರನ್ನು ತೆಗೆಯುತ್ತಾರೆ ಎಂದು ಮೊದಲೇ ಹೇಳಿದ್ದೇ. ನಾನು ಹೇಳಿದ್ದು ನೀವು ಯಾರು ನಂಬಲಿಲ್ಲ ಎಂದರು.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನನಗೆ ಮೊದಲೇ ಮಾಹಿತಿ ಇತ್ತು. ಅವಧಿಪೂರ್ವ ಚುನಾವಣೆ ಬರುತ್ತೆ ಅಂತ ನನಗೆ ಅನ್ನಿಸ್ತಿಲ್ಲ. ಯಡಿಯೂರಪ್ಪನ ತೆಗೆದರೆ ಇನ್ನೊಬ್ಬರ ಸಿಎಂ ಮಾಡ್ತಾರೆ. ಕಾಂಗ್ರೆಸ್ ಸರ್ಕಾರ ಚುನಾವಣೆ ಎದುರಿಸಲು ಸಿದ್ಧ. ಈಗ ಚುನಾವಣೆ ಬರುತ್ತೆ ಅಂತ ನನಗೆ ಅನ್ನಿಸ್ತಿಲ್ಲ ಎಂದು ತಿಳಿಸಿದರು.

ನಳೀನ್ ಕುಮಾರ್ ಕಟೀಲ್ ಆಡಿಯೋವನ್ನು ತಿರಸ್ಕಾರ ಮಾಡಿದ್ದಾರೆ. ಅದು ನಂದಲ್ಲ ಎಂದು ಕಟೀಲ್​ ಹೇಳುತ್ತಿರುವುದು ಸುಳ್ಳು ಇರಬಹುದು. ಒಳ್ಳೆ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬುದಷ್ಟೇ ನಮ್ಮ ಆಶಯ ಎಂದರು ಸಿದ್ದರಾಮಯ್ಯ.

ಹೊಸ‌ ಸಿಎಂ ಆದ ನಂತರ ಮಂತ್ರಿಗಳ ಬದಲಾವಣೆ ಆಗಬಹುದು. ನಾನು ಒಂದು ವರ್ಷದ ಹಿಂದೆಯೇ ಸಿಎಂ ಬದಲಾಗ್ತಾರೆ ಅಂದಿದ್ದು ಭವಿಷ್ಯ ಅಲ್ಲ, ಅದು ನನ್ನ ಮಾಹಿತಿ. ಭವಿಷ್ಯ ಹೇಳೋದ್ರಲ್ಲಿ ನನಗೆ ನಂಬಿಕೆ ಇಲ್ಲ, ಭವಿಷ್ಯ ಹೇಳೋರನ್ನೂ ನಾನು ನಂಬಲ್ಲ ಎಂದು ವ್ಯಂಗ್ಯವಾಡಿದರು.

ನಾನ್ಯಾಕೇ ಹೇಳಲಿ

ರಾಹುಲ್​​ ತಮ್ಮನ್ನು ಮತ್ತು ಡಿಕೆ ಶಿವಕುಮಾರ್​​ ಅವರನ್ನು ದೆಹಲಿಗೆ ಕರೆದ ಬಗ್ಗೆ ಮಾತಾಡಿದ ಸಿದ್ದರಾಮಯ್ಯ, ನಾವು ಯಾಕೇ ಹೋಗುತ್ತಿದ್ದೇವೆ ಎಂದು ಹೇಳೋದಿಲ್ಲ. ಯಾವ ಕಾರಣಕ್ಕೆ ನಮ್ಮನ್ನು ಕರೆದಿದ್ದಾರೆ ಅಂತ ನಿಮಗೆ ಹೇಳಕ್ಕೆ ಆಗುತ್ತಾ. ನನಗೂ ಅದರ ಬಗ್ಗೆ ಗೊತ್ತಿಲ್ಲ. ರಾಹುಲ್ ಗಾಂಧಿ ನಮ್ಮ ವರಿಷ್ಠರು, ಕರೆದಿದ್ದಾರೆ ಹೋಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ಉದ್ಯಮಿ ಸಂತೋಷ್ ಜಾರಕಿಹೊಳಿ ಅವರಿಗೆ “ಸೇವಾ ರತ್ನ”. ಪ್ರಶಸ್ತಿ ಪ್ರಧಾನ.

Spread the loveಉದ್ಯಮಿ ಸಂತೋಷ್ ಜಾರಕಿಹೊಳಿ ಅವರಿಗೆ “ಸೇವಾ ರತ್ನ”. ಪ್ರಶಸ್ತಿ ಪ್ರಧಾನ. ಮುರಗೋಡ: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ