Breaking News

ತಲೆ ತೆಗೀತೀನಿ ಎನ್ನುವ ದರ್ಶನ್ ಕೃಷಿ ಇಲಾಖೆ ರಾಯಭಾರಿಯಾಗಿರುವುದು ಸರಿಯಲ್ಲ’- ರೈತ ಮುಖಂಡ

Spread the love

ಮೈಸೂರು: ಹೋಟೆಲ್​​​ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ನಟ ಚಾಲೆಂಜಿಂಗ್​ ಸ್ಟಾರ್​​ ದರ್ಶನ್​​​ ಕೃಷಿ ಇಲಾಖೆಯ ರಾಯಭಾರಿಯಾಗಿ ಮುಂದುವರೆಯುವುದು ಬೇಡ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ಮನವಿ ಮಾಡಿದ್ದಾರೆ. ಸಪ್ಲೇಯರ್ ಮೇಲೆ ಹಲ್ಲೆ ಮಾಡಿರುವ ನಟ ದರ್ಶನ್​​ ನಡೆ ಖಂಡನೀಯ ಎಂದಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ, ಕೃಷಿ ಇಲಾಖೆಯ ರಾಯಭಾರಿಯಾಗಿ ದರ್ಶನ್​​ ಮುಂದುವರೆಯುವುದು ಬೇಡ. ತಲೆ ತೆಗೀತೀನಿ ಎಂದು ಹೇಳಿಕೆ ನೀಡೋದು, ಹಲ್ಲೆ ಮಾಡ್ತೀನಿ ಎಂದು ಹೇಳೋದು ಸರಿಯಲ್ಲ. ಇಂತಹ ಭಾಷೆ ಯಾರೂ ಕೂಡ ಬಳಸಬಾರದು. ಹೀಗೆ ಮಾತನಾಡುವುದು ರೈತ ಸಂಸ್ಕೃತಿ ಕೂಡ ಅಲ್ಲ ಎಂದಿದ್ದಾರೆ.

 

ಗಣ್ಯರು ಸಮಾಜಕ್ಕೆ ಮಾದರಿಯಾಗಬೇಕು. ಈಗಿನ ಕೃಷಿ ಸಚಿವರು ಕೂಡ ಸಿನಿಮಾ ನಟರಾಗಿದ್ದರು. ಸಮಾಜದಲ್ಲಿ ದರ್ಶನ್​​ ನಡವಳಿಕೆ ತಪ್ಪು. ಇದನ್ನು ತಿದ್ದಿಕೊಂಡು ಇತರರಿಗೆ ಮಾದರಿಯಾಗಲು ಹೇಳಿ ಎಂದು ಕೃಷಿ ಸಚಿವರಿಗೆ ನಾಗೇಂದ್ರ ಹೇಳಿಕೆ ನೀಡಿದ್ದಾರೆ.


Spread the love

About Laxminews 24x7

Check Also

ಹಸಿದ ಹೊಟ್ಟೆಗೆ ಆಸರೆ: ಮುನವಳ್ಳಿಯಲ್ಲಿ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ!

Spread the love​”ಬಡವರ ಮತ್ತು ಶ್ರಮಿಕ ವರ್ಗದ ಜನರ ಹಸಿವು ನೀಗಿಸುವ ಉದ್ದೇಶದಿಂದ, ಇಂದು ಮುನವಳ್ಳಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ