ಡೆಹ್ರಾಡೂನ್: ಉತ್ತರಾಖಂಡದ ಸಚಿವ ಸ್ವಾಮಿ ಯತೀಶ್ವರಾನಂದ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ. ಇದಕ್ಕೆ ಕಾರಣ ಅವರು ಧರಿಸಿರುವ ಮಾಸ್ಕ್.
ಮಾಸ್ಕ್ ಅನ್ನು ಮುಖಕ್ಕೆ ಹಾಕಿಕೊಳ್ಳದೇ ಸಭೆಯೊಂದರಲ್ಲಿ ಅದನ್ನು ಕಾಲಿನ ಬೆರಳಿಗೆ ಸಿಕ್ಕಿಸಿಕೊಂಡು ಕುಳಿತಿದ್ದು ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ. ಸೋಫಾ ಮೇಲೆ ಕಾಲಿನ ಮೇಲೆ ಕಾಲು ಹಾಕಿ ಕುಳಿತಿರುವ ಸಚಿವರು ತಮ್ಮ ಕಾಲಿನ ಬೆರಳಿನಲ್ಲಿ ಮಾಸ್ಕ್ ಸಿಕ್ಕಿಸಿಕೊಂಡಿದ್ದಾರೆ.
ಸಚಿವರೇ ಈ ರೀತಿ ಕರೊನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ವಿರೋಧಪಕ್ಷದ ನಾಯಕರು ಕೂಡ ಟೀಕಿಸಿದ್ದಾರೆ. ಮಾತ್ರವಲ್ಲದೇ ಬಿಜೆಪಿ ನಾಯಕರು ಈ ಸಭೆಯಲ್ಲಿ ಮಾಸ್ಕ್ ಧರಿಸಿಲ್ಲ. ಉತ್ತರಾಖಂಡದ ಸಚಿವರಾದ ಬಿಶನ್ ಸಿಂಗ್ ಚುಪಾಲ್ ಮತ್ತು ಸುಭೋದ್ ಉನಿಯಲ್ ಕೂಡ ಇದರಲ್ಲಿ ಭಾಗವಹಿಸಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.
Laxmi News 24×7