Breaking News

ಲಕ್ಕಿ ಸ್ಕೀಮ್ ಹೆಸರಿನಲ್ಲಿ ಹಳ್ಳಿ ಜನರಿಗೆ ಪಂಗನಾಮ ಹಾಕಿ ಆರೋಪಿಗಳು ಪರಾರಿ

Spread the love

ಯಾದಗಿರಿ: ಲಕ್ಕಿ ಸ್ಕೀಮ್ ಹೆಸರಿನಲ್ಲಿ ಹಳ್ಳಿ ಜನರಿಗೆ ಪಂಗನಾಮ ಹಾಕಿ ಆರೋಪಿಗಳು ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಯಾದಗಿರಿಯ ಕೆಎಎಸ್​​ಎಸ್ ಎಂಟರ್ಪ್ರೈಸಸ್ ಹೆಸರಿನ ಗುಂಪೊಂದು ನಿಮಗೆ ಕಾರು ,ಬೈಕ್ ಸಿಗುತ್ತದೆ ಎಂದು ಹೇಳಿ ಹಳ್ಳಿ ಜನರನ್ನು ನಂಬಿಸಿ ಲಕ್ಕಿ ಸ್ಕೀಮ್ ಹೆಸರಲ್ಲಿ ಲಕ್ಷಾಂತರ ರೂಪಾಯಿ ಹಣ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಳೆದ ಜನವರಿ ತಿಂಗಳಲ್ಲಿ ಯಾದಗಿರಿ ನಗರದಲ್ಲಿ ಕೆಎಸ್‌ಎಸ್ ಎಂಟರ್ಪ್ರೈಸಸ್ ಆರಂಭ ಮಾಡಿಲಾಗಿತ್ತು. 8 ಕಂತುಗಳಲ್ಲಿ ಪ್ರತಿ ಬಾರಿ ₹399 ಲಕ್ಕಿ ಸ್ಕೀಮ್ ಕಟ್ಟಬೇಕು ಎಂದು ಹಳ್ಳಿ ಜನರನ್ನು ನಂಬಿಸಿದ್ದರು. ಇದರಂತೆ ಸುಮಾರು 3,500 ಕ್ಕೂ ಅಧಿಕ ಮಂದಿ 6 ರಿಂದ 7 ಕಂತುಗಳ ಹಣ ಕಟ್ಟಿಸಿಕೊಂಡಿದ್ದಾರೆ. ಅಲ್ಲದೇ ಸ್ಕೀಮ್​ ಸದಸ್ಯತ್ವಕ್ಕೆ ಪ್ರತಿಯೊಬ್ಬರಿಂದ ₹100 ಕಟ್ಟಿಸಿಕೊಂಡು ಕಂತು ಮುಗಿಯುವ ಹಂತದಲ್ಲಿ ಆಫೀಸ್​ಗೆ ಬೀಗ ಹಾಕಿ ಆರೋಪಿಗಳು ಪರಾರಿಯಾಗಿದ್ದಾರೆ.

ಯಾದಗಿರಿ ಜಿಲ್ಲೆಯ ಯರಗೋಳ, ಬಂದಳ್ಳಿ,ಹತ್ತಿಕುಣಿ ಸೇರಿ ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಹಳ್ಳಿಜನರಿಗೆ ವಂಚನೆಯಾಗಿದೆ. ಕೆಎಸ್‌ಎಸ್ ಎಂಟರ್ಪ್ರೈಸಸ್ ಮ್ಯಾನೇಜರ್​ ಮಲ್ಲಿಕಾರ್ಜುನ ಹಾಗೂ ಇತರ ಸಿಬ್ಬಂದಿ ವಿರುದ್ಧ ನೂರಕ್ಕೂ ಅಧಿಕ ಮಂದಿ ಜಿಲ್ಲಾ ಎಸ್​.ಪಿ ಸಿ.ಬಿ.ವೇದಮೂರ್ತಿ ಅವರಿಗೆ ದೂರು ನೀಡಿದ್ದಾರೆ.


Spread the love

About Laxminews 24x7

Check Also

ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ

Spread the love ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಉದ್ಘಾಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ