Breaking News

ತಮ್ಮನ ಸ್ಕೂಟರ್ ರಗಳೆ ಕೇಳಲಾಗದೆ ಅಣ್ಣ ಮಾಡಿದ ಕೆಲಸಕ್ಕೆ ಪೂರ್ತಿ ದೇಶದ ಮೆಚ್ಚುಗೆ

Spread the love

ವಡೋದರಾ: ಈಗಿನ ಮಕ್ಕಳು ಹೈ ಸ್ಕೂಲ್ ಮೆಟ್ಟಿಲು ಹತ್ತಿದಾಕ್ಷಣ ಬೈಕ್ ಅಥವಾ ಸ್ಕೂಟರ್ ಬೇಕು ಎಂದು ಹಠ ಹಿಡಿದು ಬಿಡುತ್ತಾರೆ. ಅದೇ ರೀತಿ ಹಠ ಹಿಡಿದ ತಮ್ಮನ ಸಮಾಧಾನ ಮಾಡಲೆಂದು ಅಣ್ಣ ಮಾಡಿದ ಕೆಲಸ ಇದೀಗ ಪೂರ್ತಿ ದೇಶದಲ್ಲೇ ಸುದ್ದಿಯಾಗುವಂತಾಗಿದೆ.

ಗುಜರಾತ್​ನ ವಡೋದರ ಮೂಲಕ ವಿವೇಕ್ (25)ನ ತಮ್ಮ ಎಸ್​ಎಸ್​ಎಲ್​ಸಿ ಓದುತ್ತಿದ್ದನಂತೆ. ಲಾಕ್​ಡೌನ್ ಸಮಯದಲ್ಲಿ ಕೆಲಸವೂ ಸಿಗದೆ ವಿವೇಕ್ ಮನೆಯಲ್ಲೇ ಕುಳತಿದ್ದ. ಆ ವೇಳೆ ಆತನ ತಮ್ಮ ಟ್ಯೂಷನ್​ಗೆ ಹೋಗಿ ಬರಲು ಸ್ಕೂಟರ್ ಬೇಕೆಂದು ಹಠ ಹಿಡಿದನಂತೆ. ಆದರೆ ಆತನಿಗೆ 18 ವರ್ಷ ವಯಸ್ಸಾಗಿರಲಿಲ್ಲವಾದ್ದರಿಂದ ಸ್ಕೂಟರ್ ಕೊಡಿಸಲು ಕುಟುಂಬ ಹಿಂದೇಟು ಹಾಕಿದೆ. ಆಗ ತಮ್ಮ ಬೇಸರಗೊಂಡಿದ್ದನ್ನು ಕಂಡು ತಾನೂ ಬೇಸರಗೊಂಡ ವಿವೇಕ್​ ಹೊಸ ಪ್ಲಾನ್ ಒಂದನ್ನು ಮಾಡಿದ್ದಾನೆ.

ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಓದಿದ್ದ ವಿವೇಕ್ ತಾನು ಕೊನೆಯ ವರ್ಷದ ಇಂಜಿನಿಯರಿಂಗ್ ಅಭ್ಯಾಸ ಮಾಡುವಾಗ ಎಲೆಕ್ಟ್ರಿಕ್ ಸ್ಕೂಟರ್ ಪ್ರಾಜೆಕ್ಟ್ ಮಾಡಿದ್ದನಂತೆ. ಅದೇ ಟೆಕ್ನಾಲಜಿಯನ್ನು ಮನೆಯಲ್ಲಿ ಮೂಲೆ ಸೇರಿದ್ದ ಸೈಕಲ್​ಗೆ ಅಳವಡಿಸಲು ಮುಂದಾಗಿದ್ದಾನೆ. ಸತತ ಪ್ರಯತ್ನ ಮಾಡಿ ತಮ್ಮನ ಮಾಮೂಲಿ ಸೈಕಲ್​ ಅನ್ನು ಎಲೆಕ್ಟ್ರಿಕ್ ಸೈಕಲ್ ಆಗಿ ಪರಿವರ್ತಿಸಿದ್ದಾನೆ. ಆ ವಿಶೇಷ ಸೈಕಲ್​ ಅನ್ನು ತಮ್ಮ ಖುಷಿಯಿಂದ ಟ್ಯೂಷನ್​ಗೆ ತೆಗೆದುಕೊಂಡು ಹೋಗುತ್ತಿದ್ದನಂತೆ. ಅದನ್ನು ಗಮನಿಸಿದ ಆತನ ಅನೇಕ ಸ್ನೇಹಿತರೂ ಕೂಡ ವಿವೇಕ್​ ಬಳಿ ಸೈಕಲ್​ಗೆ ಆರ್ಡರ್ ಕೊಟ್ಟು ಮಾಡಿಸಿಕೊಂಡಿದ್ದಾರಂತೆ.

ಬೇಡಿಕೆ ಹೆಚ್ಚಾದ ನಂತರ ವಿವೇಕ್ ತನ್ನ ಸೈಕಲ್​ಗೆ ODO bikes ಎನ್ನುವ ಹೆಸರಿಟ್ಟಿದ್ದಾನೆ. ದುಬೈನಲ್ಲಿ ಆತನ ಸೈಕಲ್​ ಡೆಮೋ ಕೂಡ ಕೊಡಲಾಗಿದೆಯಂತೆ. ಇದೀಗ ಆನ್​ಲೈನ್​ ಆಯಪ್​ಗಳಾದ ಅಮೇಜಾನ್, ಫ್ಲಿಪ್​ಕಾರ್ಟ್ಗಳಲ್ಲೂ ಈ ಸೈಕಲ್ ಲಭ್ಯವಿದೆ.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ