Breaking News

ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಜಾಗೋ ಮೈಸೂರು ಅಧ್ಯಕ್ಷ. ಪತ್ರದಲ್ಲೇನಿದೆ?

Spread the love

ಮೈಸೂರು: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಬಿಜೆಪಿ ಕಾರ್ಯಕರ್ತರೊಬ್ಬರು ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದಾನೆ.

ಜಾಗೋ ಮೈಸೂರು ಅಧ್ಯಕ್ಷ ಚೇತನ್ ಮಂಜುನಾಥ್‌ ಎಂಬವರು ಪತ್ರ ಬರೆದಿದ್ದು, ʻಟಿಎಂಸಿ ಕಾರ್ಯಕರ್ತರು, ಮೂಲಭೂತವಾದಿಗಳಿಂದ ಹಿಂಸೆಯಾಗುತ್ತಿದೆ. 30 ಬಿಜೆಪಿ ಕಾರ್ಯಕರ್ತರು, ಅಮಾಯಕ ಹಿಂದೂಗಳ ಹತ್ಯೆಯಾಗಿದೆ. 7 ಸಾವಿರ ಹಿಂದೂ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಈ ಸಂಬಂಧ ಸುಮಾರು 15,000 ಪ್ರಕರಣಗಳು ದಾಖಲಾಗಿವೆ. 1 ಲಕ್ಷಕ್ಕೂ ಹೆಚ್ಚು ಜನ ಜೀವಭಯದಿಂದ ಪಕ್ಕದ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಮಮತಾ ಬ್ಯಾನರ್ಜಿ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಎಲ್ಲಾ ಹಿಂಸೆಗಳಿಗೆ ಸರ್ಕಾರ ಪರೋಕ್ಷ ಬೆಂಬಲ ನೀಡುತ್ತಿದೆ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿʼ ಎಂದು ಮನವಿ ಮಾಡಿದ್ದಾರೆ.

ʻತನಿಖೆಯನ್ನು ಚುರುಕುಗೊಳಿಸಿ ಎಲ್ಲಾ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ. ನೊಂದ ಎಲ್ಲಾ ಸಂತ್ರಸ್ತರಿಗೆ ವಿಶೇಷ ಹಣಕಾಸು ಪ್ಯಾಕೇಜ್ ನೀಡಿ. ಎಲ್ಲರಿಗೂ ಸೂಕ್ತ ರಕ್ಷಣೆ ನೀಡಿʼ ಎಂದು ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆ: ಡಿಜಿಟಲ್ ಅರೆಸ್ಟ್​​ನಿಂದ 84 ಲಕ್ಷ ರೂ. ವಂಚನೆಗೆ ಬ್ರೇಕ್

Spread the loveಮಂಗಳೂರು: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಎಂದು ಖದೀಮರು ಅಮಾಯಕರನ್ನು ವಂಚಿಸಿ ಕೋಟಿಗಟ್ಟಲೆ ಹಣ ವಂಚಿಸುತ್ತಿರುವುದು ಬೆಳಕಿಗೆ ಬರುತ್ತಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ