ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇಂದಿನಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಾಗಿ ಕಾರ್ಯಚರಿಸಲಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತಾನಾಡಿದ ಅವರು, ಇಷ್ಟು ವರ್ಷ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಾಗಿ ಸೇವೆ ಸಲ್ಲಿಸಿದ ಸಂಸ್ಥೆ ಇನ್ಮುಂದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಎನ್ನುವ ಹೆಸರಿನೊಂದಿಗೆ ಸೇವೆ ಮುಂದುವರೆಸಲಿದೆ ಎಂದು ಹೇಳಿದರು.
ತಮ್ಮ ಪುತ್ರನ ಕಾರು ಅಪಘಾತ ಪ್ರಕರಣ ಕುರಿತಿ ಪ್ರತಿಕ್ರಿಯಿಸಿದ ಅವರು, ಅಪಘಾತ ವಾಗಿದ್ದು ಸತ್ಯ, ನಮ್ಮ ಕಾರು ಇದ್ದದ್ದು ಸತ್ಯ, ಅಪಘಾತದಲ್ಲಿ ವ್ಯಕ್ತಿಯೋರ್ವನಿಧನರಾಗಿದ್ದು ವಿಷಾಧನೀಯ. ಚಿದಾನಂದ ಸವದಿ ಮುಂದಿನ ಫಾರ್ಚೂನ್ ಕಾರ್ ನಲ್ಲಿದ್ದರು. ಹಿಂದಿನ ಕಾರ್ ಅಪಘಾತವಾಗಿದ್ದು, ಎಫ್ ಐ ಆರ್ ಆಗಿದೆ, ಆ ಕುರಿತು ತನಿಖೆ ನಡೆಯುತ್ತಿದೆ ಎಂದರು.
ಚಿದಾನಂದ ಮೇಲೆ ಎಫ್ ಐ ಆರ್ ದಾಖಲಿಸೋ ಪ್ರಶ್ನೆ ಉದ್ಭವಿಸೋದಿಲ್ಲ.ಅವರು ಅಪಘಾತವಾದ ಕಾರಿನಲ್ಲಿ ಇರಲಿಲ್ಲ, ರಾಜಕೀಯ ದುರುದ್ದೇಶದಿಂದ ಆರೋಪ ಮಾಡಲಾಗುತ್ತಿದೆ. ಚಿದಾನಂದ್ ಹೆಸರು ಎಫ್ ಐ ಆರ್ ನಲ್ಲಿ ಕೈ ಬಿಡಲಾಗಿದೆ ಅಂತ ಆರೋಪಿಸುತ್ತಿದ್ದಾರೆ .ಎರಡು ದಿನದಲ್ಲಿ ಇದರ ಹಿಂದೆ ಯಾರಿದ್ದಾರೆ ಅನ್ನೋದನ್ನು ಬಹಿರಂಗ ಮಾಡ್ತೇನೆ ಎಂದರು.
Laxmi News 24×7