Breaking News

ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಇನ್ನಿಲ್ಲ

Spread the love

ಮುಂಬೈ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ (98) ಇಂದು ಮುಂಬೈ ನಲ್ಲಿ ನಿಧನರಾಗಿದ್ದಾರೆ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದಿಲೀಪ್ ಕುಮಾರ್ ಆರೋಗ್ಯ ಕಳೆದ 5 ದಿನಗಳಿಂದ ಬಿಗುಡಾಯಿಸಿತ್ತು. ಜೂನ್ 30ರಂದು ಮುಂಬೈ ನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಇಂದು ಮುಂಜಾನೆ (ಜುಲೈ 7) 7:30 ರ ಸಮಯದಲ್ಲಿ ದಿಲೀಪ್ ಕುಮಾರ್ ವಿಧಿವಾಶರಾಗಿದ್ದಾರೆ ಎಂದು ಹಿಂದೂಜಾ ಆಸ್ಪತ್ರೆಯ ವೈದ್ಯ ಡಾ. ಜಲೀಲ್ ಪಾರ್ಕರ್ ಖಚಿತಪಡಿಸಿದ್ದಾರೆ.

ಕಳೆದ 5 ವರ್ಷದಿಂದಲೂ ದಿಲೀಪ್ ಕುಮಾರ್ ಅನಾರೋಗ್ಯದಿಂದ ಆಗಿಂದ್ದಾಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ತಮ್ಮ 94 ನೇ ಜನ್ಮದಿನವನ್ನೂ ಆಸ್ಪತ್ರೆಯಲ್ಲೇ ಆಚರಿಸಿಕೊಂಡಿದ್ದರು.

ದಿಲೀಪ್ ಕುಮಾರ್ ಅವರ ಮೊದಲ ಹೆಸರು ಯೂಸೂಫ್ ಖಾನ್ ಎಂದಾಗಿತ್ತು. ಬಾಲಿವುಡ್ ಚಿತ್ರರಂಗದಲ್ಲಿ ಇವರ ನಟನೆಯ ಹಲವು ಚಿತ್ರಗಳು ದಾಖಲೆಯನ್ನು ಬರೆದಿದ್ದವು. ನಾಯಾ ದೌರ್, ಮುಗಲ್-ಇ -ಅಜಂ. ದೇವ್ ದಾಸ್, ರಾಮ್ ಔರ್ ಶ್ಯಾಮ್, ಅಂದಾಜ್, ಮಧುಮತಿ , ಗಂಗಾ ಜಮುನಾ ಮುಂತಾದವು. 80ರ ದಶಕದಲ್ಲಿ ರೊಮ್ಯಾಂಟಿಕ್ -ಟ್ರ್ಯಾಜಿಕ್ ಪಾತ್ರಗಳ ಮೂಲಕವೇ ಜನಪ್ರಿಯರಾಗಿದ್ದರು. ಕ್ರಾಂತಿ, ಶಕ್ತಿ, ಕರ್ಮ, ಸೌಧಾಗರ್, ಮುಂತಾದವು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದವು. 1998 ರಲ್ಲಿ ಬಂದ ‘ಕಿಲಾ’ ಅವರ ಕೊನೆಯ ಚಿತ್ರವಾಗಿತ್ತು.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ