Breaking News

Cyber Crime ಕೇಂದ್ರ ಸರ್ಕಾರಿ ಯೋಜನೆ ಹೆಸರಲ್ಲಿ ಹಾಕಿದ್ರು ನಾಮ.. ಹುಬ್ಬಳ್ಳಿ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ದೋಖಾ

Spread the love

ನಾವು ಬ್ಯಾಂಕ್​ನಿಂದ ಕರೆ ಮಾಡ್ತಿದ್ದೇವೆ.. ನಿಮಗೆ ಓಟಿಪಿ ಬಂದಿದ್ಯಾ.. ಓಟಿಪಿ ಬಂದಿದ್ರೆ ಹೇಳಿ.. ನಿಮಗೆ ಸ್ಪೆಷಲ್ ಆಫರ್ ಇದೆ.. ಬೇಕಾದ್ರೆ ತಗೊಳ್ಳಿ.. ಹಾಗೆ ಹೀಗೆ ಅಂತಾ ಪೂಸಿ ಹೊಡೆದು ನಿಮ್ಮ ಅಕೌಂಟ್ಗೆ ಕನ್ನ ಹಾಕ್ತಿದ್ದ ಸೈಬರ್ ಖದೀಮರು ಈಗ ಹೊಸ ಹಾದಿ ಹಿಡಿದಿದ್ದಾರೆ.

ಹುಬ್ಬಳ್ಳಿಯಲ್ಲಿ ಸೈಬರ್ ವಂಚಕರು ಫುಲ್ ಆಯಕ್ಟಿವ್ ಆಗಿದ್ದು ಕೇಂದ್ರ ಸರ್ಕಾರ ಪುನರ್ಬಳಕೆ ಇಂಧನ ಸಚಿವಾಲಯದ ಹೆಸರಲ್ಲಿ ಧೋಖಾ ಎಸಗಿದ್ದಾರೆ. ಸೋಲಾರ್ ಪ್ಯಾನಲ್ ಚೈನ್ ಲಿಂಕ್ ಅನ್ನೋ ನಕಲಿ ಯೋಜನೆ ಸೃಷ್ಟಿಸಿ ವ್ಯಕ್ತಿಯೊಬ್ಬರಿಂದ ಸುಮಾರು 3 ಲಕ್ಷ 38 ಸಾವಿರ ರೂಪಾಯಿ ಹೂಡಿಕೆ ಮಾಡಿಸಿ, ವಂಚಿಸಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್ ಮೂಲಕ ಪರಿಚಯವಾಗಿದ್ದ. ಪ್ರಧಾನಿ ಮೋದಿ ಫೋಟೋ ಇರೋ ವೆಬ್ಸೈಟ್ ಸೃಷ್ಟಿಸಿ, ಅದರಲ್ಲಿ ವಿವಿಧ ಹೂಡಿಕೆ ಸ್ಕೀಂಗಳ ಬಗ್ಗೆ ಉಲ್ಲೇಖ ಮಾಡಿದ್ದ. ಇದನ್ನ ನಂಬಿ ಮೊದಲಿಗೆ 1,516 ರೂಪಾಯಿ ಹೂಡಿದ್ದಾರೆ. ಆರಂಭದಲ್ಲಿ ರಿಟರ್ನ್ಸ್ ನೀಡಿ ವಿಶ್ವಾಸ ಮೂಡಿಸಿದ್ದಾರೆ. ಇದರಿಂದ ಪ್ರೇರಿತನಾದ ದೂರುದಾರ ಪರಿಚಯಸ್ಥರಿಂದಲೂ ಹೂಡಿಕೆ ಮಾಡಿಸಿ ಮೋಸ ಹೋಗಿದ್ದಾನೆ.

ದಿನ ಕಳೆದಂತೆ ಸ್ಕೀಂಗಳ ಪ್ರಯೋಜನ ಲಭಿಸದೇ ಇದ್ದಾಗ ಹೂಡಿಕೆದಾರರು ಸಂಪರ್ಕಕ್ಕೆ ಯತ್ನಿಸಿದ್ದಾರೆ. ವಂಚಕರು ಸಂಪರ್ಕಕ್ಕೆ ಸಿಗದೇ ಇದ್ದಾಗ, ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾರ್ವಜನಿಕರು ಈ ರೀತಿ ಮೋಸ ಹೋಗಬಾರದು. ಒಂದು ವೇಳೆ ಮೋಸದ ಜಾಲಕ್ಕೆ ಬಲಿಯಾಗಿದ್ರೆ, ಸೂಕ್ತ ದಾಖಲೆಗಳೊಂದಿಗೆ ದೂರು ನೀಡುವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

ಸೈಬರ್ ವಂಚಕರ ಜಾಲಕ್ಕೆ ವಿದ್ಯಾವಂತರೇ ಬಲಿಯಾಗ್ತಿದ್ದಾರೆ. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಂಚನೆ ಮಾಡೋರು ಇರ್ತಾರೆ ಅಂತಾ ಗೊತ್ತಿದ್ರೂ, ವಂಚಕರ ವಂಚನೆಯ ಜಾಲದಲ್ಲಿ ಸಿಲುಕಿ ಮೋಸ ಹೋಗ್ತಿರೋದು ಮಾತ್ರ ವಿಪರ್ಯಾಸವೇ ಸರಿ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ