Breaking News

ಕಿತ್ತೂರಿನ ಅಮಾಯಕ ಮುದುಕಿಯ ಜಮೀನು ಕಿತ್ತು ಕೊಂಡ್ರ ಪ್ರಭಾವಿ ಗಳು…..? ನ್ಯಾಯ ಕೊಡಿಸಿ ಎಂದು ಅಂಗಲಾಚಿದ ಹಿರಿಯ ಜೀವ…

Spread the love

ಕಿತ್ತೂರ: ಕಿತ್ತೂರು ರಾಣಿ ಚೆನ್ನಮ್ಮನ ಕಿತ್ತೂರ ಇಲ್ಲಿ ಒಂದು ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ .ಚೆನ್ನಮನ ನಾಡಲ್ಲಿ ಇಂಥದೊಂದು ಘಟನೆ ನಡೆದದ್ದು ಎಲ್ಲರಿಗೂ ಒಂತರ ಆಶ್ಚರ್ಯ ತಂದಿದೆ.

ಒಬ್ಬ ಹಿರಿಯ ಜೀವಿಯ ಆಸ್ತಿಯನ್ನ ಕೆಲವೊಂದಿಷ್ಟು ಜನ ಅವರಿಗೆ ಗೊತ್ತಾಗದಂತೆ ದಾಖಲಾತಿ ಗಳನ್ನ ತಿರುಚಿ ತಮ್ಮ ಹೆಸರಿನಲ್ಲಿ ಮಾಡಿಕೊಂಡಿದ್ದಾರೆ ಎಂಬ ಆರೋಪ .

ಹೌದು ಕಿತ್ತೂರಿನ ನಿವಾಸಿ ಇವರು ಸ್ವಲ್ಪ ಜನ ಕಿರಾತಕ ಜನ ಇವರನ್ನ ಯಾಮಾರಿಸಿ ತಮ್ಮ ಹೆಸರಿನಲ್ಲಿ ಇವರ ಆಸ್ತಿಪಾಸ್ತಿ ಗಳನ್ನ ತಮ್ಮ ಹೆಸರಿನಲ್ಲಿ ಮಾಡಿಕೊಳ್ಳೋ ದು ಅಷ್ಟೇ ಅಲ್ಲದೆ ಅಲ್ಲಿ ಮನೆ ಗಳನ್ನ ಕೂಡ ಇವರು ಕಟ್ಟಿ ಕೊಂಡಿದ್ದಾರೆ ಎಂಬ ಆರೋಪ ಕೂಡ ಗ್ರಾಮಸ್ಥರು ನಮ್ಮ ವಾಹಿನಿಗೆ ಮಾಡಿದ್ದಾರೆ

ಇನ್ನು ಒಂದು ಬಡ ಹಿರಿಯ ಜೀವ ಇವಾಗ ಸಂಕಷ್ಟ ದಲ್ಲ್ಲಿದೆ ಅದಕ್ಕೆ ಅಲ್ಲಿನ ಯುವಕರ ತಂಡ ಒಂದು ಬೆಂಬಲಕ್ಕೆ ನಿಂತಿದೆ. ಇನ್ನು ಈ ಇಂದು ತಂಡ ಆ ಹಿರಿಯ ಜೀವಕ್ಕೆ ನ್ಯಾಯ ಕೊಡಿಸಬೇಕು ಎಂಬುದು ಎಲ್ಲ ಯುವಕರ ಆಶಯ ವಾಗಿದೆ.

ಇನ್ನು ನಮ್ಮ ವಾಹಿನಿಯ ಕಳಕಳಿ ಏನೆಂದರೆ ಅಲ್ಲಿನ ಅಧಿಕಾರಿಗಳು ಈ ಯುವಕರ ಬೆನ್ನಿಗೆ ನಿಂತು ಅದಕ್ಕೆ ಸಂಭದ ಪಟ್ಟ ದಾಖಲಿತ
ಗಳನ್ನ ಪರಿಶೀಲಿಸಿ ಆ ಒಂದು ಬಡ ಜೀವಕ್ಕೆ ನ್ಯಾಯಾ ಕೊಡಿಸಬೇಕು ಎಂಬುದು ನಮ್ಮ ಆಶಯ ವಾಗಿದೆ.

ಇನ್ನು ಈ ಒಂದು ಜಮೀನು ಕಿತ್ತೂರು ಹತ್ತಿರ ನಿರ್ಮಾಣ ವಾಗದೆ ಹಾಗೆ ಹಾಳು ಬಿದ್ದಿರುವ ಮಿನಿ ವಿಧಾನ ಸೌಧದ ಹಿಂಭಾಗ ದಲ್ಲಿದೆ . ಇದನ್ನ y ಹಾಗೂ ನಮ್ಮ ವಾಹಿನಿ ತಂಡ ಅಲ್ಲಿ ಭೇಟಿ ನೀಡಿ ಸಂಭಂದ ಪಟ್ಟ ದಾಖಲಾತಿ ಗಳನ್ನ ಪರಿಶೀಲನೆ ಮಾಡಿದ ನಂತರ ಮುಂದಿನ ಸುದ್ದಿಯಲ್ಲಿ ಮತ್ತಷ್ಟು ವಿವರಣೆ ನೀಡುತ್ತೇವೆ..

 


Spread the love

About Laxminews 24x7

Check Also

ಇವತ್ತು ನೀರು ಕಡಿಮೆಯಾಗುತ್ತೆ:ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ ನದಿತೀರದ ಜನರಲ್ಲಿ ಅಭಯ

Spread the love ಇವತ್ತು ನೀರು ಕಡಿಮೆಯಾಗುತ್ತೆ:ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ ನದಿತೀರದ ಜನರಲ್ಲಿ ಅಭಯ ಚಿಕ್ಕೋಡಿ: ಕೃಷ್ಣಾ ಸೇರಿದಂತೆ ದೂಧಗಂಗಾ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ