ಬೆಳಗಾವಿ: ಬಣ್ಣ ಮಾಸಿ, ಹರಿದು ಹೋಗಿರುವ ಕನ್ನಡ ಧ್ವಜವನ್ನು ಬದಲಿಸಬೇಕೆಂದು ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡಪರ ಸಂಘಟನೆಗಳು ಧರಣಿ ಕೈಗೊಂಡಿವೆ. ಮೂರು ತಿಂಗಳಿಂದ ಮನವಿ ಮಾಡುತ್ತಿದ್ದರೂ ಧ್ಚಜ ಬದಲಾವಣೆ ಮಾಡಿಲ್ಲ. ಉದ್ದೇಶಪೂರ್ವಕವಾಗಿ ಪಾಲಿಕೆ ಹೀಗೆ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕನ್ನಡ ಧ್ವಜ ಹಾಗೂ ಹಗ್ಗ ತೆಗೆದುಕೊಂಡು ಬಂದಿರುವ ಕನ್ನಡಪರ ಹೋರಾಟಗಾರರು ಕೊರಳಿಗೆ ಹಗ್ಗ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಧ್ವಜಸ್ತಂಭದ ಸುತ್ತ ಬ್ಯಾರಿಕೇಡ್ ಅಳವಡಿಸಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಧ್ವಜಸ್ತಂಭದ ಬಳಿ ಹೋರಾಟಗಾರರು ಹೋಗದಂತೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ವಿರೋಧದ ನಡುವೆಯೂ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಸ್ಥಾಪನೆ ಮಾಡಲಾಗಿದೆ.
ಧ್ವಜ ಬದಲಿಸಲು ಕನ್ನಡಪರ ಹೋರಾಟಗಾರ ಶ್ರೀನಿವಾಸ್ ತಾಳೂಕರ್, ವಾಜೀದ್ ಹಿರೇಕೂಡಿ ಆಗ್ರಹಪಡಿಸಿದ್ದಾರೆ. ಪಾಲಿಕೆ ಉದ್ದೇಶಪೂರ್ವಕವಾಗಿ ಕನ್ನಡ ಧ್ವಜವನ್ನು ಬದಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇದೇ ಮಾದರಿಯಲ್ಲಿ ಡಿಸೆಂಬರ್ 28ರಂದು ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ಹಾರಾಡಿಸಲಾಗಿತ್ತು. ಈ ವೇಳೆ ಬೆಳಗಾವಿಯಲ್ಲಿ ಪರ ವಿರೋಧ ಪ್ರತಿಭಟನೆಯೂ ನಡೆದಿತ್ತು ಎಂಬುವುದನ್ನು ಇಲ್ಲಿ ಸ್ಮರಿಸಬಹುದು.
 Laxmi News 24×7
Laxmi News 24×7
				 
		 
						
					 
						
					 
						
					