Breaking News

ಕೆಎಸ್ಆರ್‌ಟಿಸಿಯ ಮಿಡಿ ಬಸ್ಸುಗಳು ಈಗ ಅಂಬುಲೆನ್ಸ್………..

Spread the love

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪ್ರಮಾಣ ಹೆಚ್ಚುತ್ತಿರುವ ಕಾರಣ ಕೆಎಸ್‍ಆರ್‍ಟಿಸಿಯ ಮಿಡಿ ಬಸ್ಸುಗಳನ್ನು ಅಂಬುಲೆನ್ಸ್ ಗಳನ್ನಾಗಿ ಬಳಸಿಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ.ಇದರ ಬಗ್ಗೆ ಮಾಹಿತಿ ನೀಡಿ ಸುತ್ತೋಲೆ ಹೊರಡಿಸಿರುವ ಕೆ.ಎಸ್.ಆರ್.ಟಿ.ಸಿ. ಈ ಅಂಬುಲೆನ್ಸ್ ಗಳಲ್ಲಿ ತುರ್ತುಸ್ಥಳದಿಂದ ರೋಗಿಯನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ವರ್ಗಾಹಿಸಲು ಮತ್ತು ಆಸ್ವತ್ರೆಯನ್ನು ತಲುಪಿದ ನಂತರ ತುರ್ತುಕೋಣಿಗೆ ರೋಗಿಯನ್ನು ತ್ವರಿತವಾಗಿ ಮತ್ತು ಆರಾಮದಾಯಕವಾಗಿ ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ 2 ಸ್ಟ್ರೆಚರ್ ಗಳನ್ನು ನಿರ್ಮಾಣ ಮಾಡಲಾಗಿದೆ.

ಬ್ಯಾಂಡೇಜ್, ಕ್ರಿಮಿನಾಶಕ, ಗಾಜ್ಡ್ರೆಸ್ಸಿಂಗ್, ಪ್ಲಾಸ್ಟರ್, ಕ್ರೆಪ್ಬ್ಯಾಂಡೇಜ್, ಡ್ರೆಸಿಂಗ್, ಕೈ ಗವಸುಗಳು, ಕತ್ತರಿ ಮತ್ತು ಚಿಮುಟಗಳು, ಮತ್ತು ಸೋಂಕು ನಿವಾರಕ ಪರಿಹಾರಗಳನ್ನು ಒಳಗೊಂಡಿರುವ ಪ್ರಥಮ ಚಿಕಿತ್ಸಾ ಕಿಟ್‍ಗಳನ್ನು ಅಂಬುಲೆನ್ಸ್ ಹೊಂದಿದೆ. ಆಕ್ಸಿಜನ್, ಶುದ್ಧವಾದ ಅಮ್ಲಜನಕವನ್ನು ಕೃತಕವಾಗಿ ಒದಗಿಸುವ ಮೂಲಕ ರೋಗಿಯ ಜೀವವನ್ನು ಉಳಿಸಲು ಸಹಾಯ ಮಾಡುವ ಒಂದು ಆಮ್ಲಜನಕ ಸಿಲಿಂಡರ್ ಅನ್ನು ಅಂಬುಲೆನ್ಸ್‍ನಲ್ಲಿ ಇರಿಸಲಾಗಿದೆ.

ಕೈ ತೊಳೆಯಲು 20 ಲೀಟರ್ ನ ನೀರಿನ ಟ್ಯಾಂಕ್, ಮತ್ತೊಂದು ಟ್ಯಾಂಕ್ ನೀರು ಸಂಗ್ರಹಿಸಲು ಒದಗಿಸಲಾಗಿದೆ. ಕೈ ತೊಳೆದು ನೀರನ್ನು ಸಂಗ್ರಹಿಸಲು ಪ್ರತ್ಯೇಕ ಪ್ಲಾಸ್ಟಿಕ್ ಟ್ಯಾಂಕ್ ಒದಗಿಸಲಾಗಿದೆ. ಡ್ರೈವರ್ ಗೆ ಸುಲಭವಾದ ಪ್ರತ್ಯೇಕ ಚಾಲಕ ವಿಭಾಗವನ್ನು ನಿರ್ಮಿಸಲಾಗಿದೆ. ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅಂಬುಲೆನ್ಸ್ ಮುಂಭಾಗದ ಮೇಲ್ಬಾಗದಲ್ಲಿ ಕೆಂಪು ಮತ್ತು ನೀಲಿ ಬಣ್ಣ ಸೂಚಕಗಳನ್ನು ಮತ್ತು ಸೈರನ್‍ನನ್ನು ಜೋಡಿಸಲಾಗಿದೆ.

ಒಟ್ಟು 5 ಸಂಖ್ಯೆ 2 ಆಸನಗಳ ಪ್ರಯಾಣಿಕರ ಆಸನ ಚೌಕಟ್ಟುಗಳನ್ನು ಒಳಗೆ ಒದಗಿಸಲಾಗಿದೆ. ಚಾಲಕರ ಕ್ಯಾಬಿನ್ ಜೋಡನೆಗೆ ಎದುರಾಗಿರುವ ಸ್ಟ್ರೀಟ್ ಲೈಟ್‍ಗೆ 3 ಸಂಖ್ಯೆ ಮತ್ತು ರೋಗಿಗಳ ಹತ್ತಿರ ವಿರುವ ವಿರುದ್ದ ದಿಕ್ಕಿನಲ್ಲಿ 1 ಸಂಖ್ಯೆ ನೀಲಿ ಬಣ್ಣದ ಕಿಟಕಿ ಪರದೆಗಳನ್ನು ಎರಡೂ ಕಡೆ ಒದಗಿಸಲಾಗಿದೆ. 4 ಫ್ಯಾನ್‍ಗಳು ಮತ್ತು ಸ್ಯಾನಿಟೈಜರ್ ಒಳಗೆ ಅಳವಡಿಸಲಾಗಿದೆ.

 


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ