Breaking News

ದೇಗುಲದ ಅರ್ಚಕನಿಂದ ಶೌಚಾಲಯ ಶುಚಿ ಮಾಡಿಸಿದ ಅಧಿಕಾರಿ!

Spread the love

ಅರ್ಚಕನಿಂದ ಶೌಚಾಲಯವನ್ನು ಅಧಿಕಾರಿಯೊಬ್ಬರು ಶುಚಿ ಮಾಡಿಸಿದ ಘಟನೆ ಕೋಲಾರದ ಐತಿಹಾಸಿಕ ಬಂಗಾರು ತಿರುಪತಿ ದೇವಸ್ಥಾನದಲ್ಲಿ ನಡೆದಿದ್ದು, ಈ ಫೋಟೊಗಳು ಇದೀಗ ವೈರಲ್ ಆಗಿದೆ.

ಕೆಜಿಎಫ್ ತಾಲೂಕಿನ ಬೇತಮಂಗಲ ಹೋಬಳಿಯ‌ ಬಂಗಾರು ತಿರುಪತಿ ದೇಗುಲ ಕಾರ್ಯ ನಿರ್ವಾಹಕ ಅಧಿಕಾರಿ ಸುಬ್ರಹ್ಮಣಿ ಎಂಬುವವರು ದೇವಾಲಯದ ಅರ್ಚಕ ಲಕ್ಷ್ಮೀನಾರಾಯಣಪ್ಪ ಅವರಿಂದ ದೇವಾಲಯದ ಪ್ರಾಂಗಣ ಮತ್ತು ಶೌಚಾಲಯ ಶುಚಿಗೊಳಿಸಿದ್ದಾರೆ.

ಅಂಗಳ ಗ್ರಾಮದ ದೇಗುಲವೊಂದರಲ್ಲಿ ಅರ್ಚಕರಾಗಿ ಕೆಲಸ ಮಾಡ್ತಿರುವ ಲಕ್ಷ್ಮೀನಾರಾಯಣ ಬಂಗಾರು ತಿರುಪತಿ ದೇಗುಲಕ್ಕೆ ಹೂಗಳನ್ನ ತಂದು ಮುಡಿಸುವ ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ಹಿನ್ನಲೆ ಬಂಗಾರು ತಿರುಪತಿ ದೇಗುಲದಲ್ಲಿ ಡಿ ಗ್ರೂಪ್ ಸಿಬ್ಬಂದಿ ಅನುಪಸ್ಥಿತಿ ಹಿನ್ನೆಲೆಯಲ್ಲಿ ಈ ಕೆಲಸವನ್ನು ಅರ್ಚಕರಿಂದ ಮಾಡಿಸಿದ್ದಾರೆ ಎನ್ನಲಾಗಿದೆ.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ