Breaking News

ಬೆಳಗಾವಿ ದಕ್ಷಿಣ ಮತಕ್ಷೇತ್ರದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ವ್ಯಾಕ್ಸೀನ್ ಹಾಕಿಸುವ ಸಂಕಲ್ಪ ಮಾಡಿರುವ ಶಾಸಕ ಅಭಯ ಪಾಟೀಲ,

Spread the love

ಬೆಳಗಾವಿ – ಬೆಳಗಾವಿ ದಕ್ಷಿಣ ಮತಕ್ಷೇತ್ರದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ವ್ಯಾಕ್ಸೀನ್ ಹಾಕಿಸುವ ಸಂಕಲ್ಪ ಮಾಡಿರುವ ಶಾಸಕ ಅಭಯ ಪಾಟೀಲ, ಕ್ಷೇತ್ರದಲ್ಲಿ ಲಸಿಕಾ ಕ್ರಾಂತಿಗೆ ಮುಂದಾಗಿದ್ದಾರೆ.
ನೂರಕ್ಕೂ ಹೆಚ್ಚು ಕಾರ್ಯಕರ್ತರ ಪಡೆಯನ್ನು ಲಸಿಕಾ ಕಾರ್ಯದ ನೆರವಿಗೆ ನಿಯೋಜಿಸಿರುವ ಶಾಸಕ ಅಭಯ ಪಾಟೀಲ ಈಗಾಗಲೇ ಕ್ಷೇತ್ರದ ಸಾವಿರಾರು ಜನರಿಗೆ ವ್ಯಾಕ್ಸೀನ್ ದೊರಕಿಸಿಕೊಟ್ಟಿದ್ದು, ಶೀಘ್ರದಲ್ಲೇ ಕ್ಷೇತ್ರದಲ್ಲಿ ಬಹು ದೊಡ್ಡ ಲಸಿಕಾ ಅಭಿಯಾನ ನಡೆಸಲು ನಿರ್ಧರಿಸಿದ್ದಾರೆ.
ಜನಸಂಘದ ಸಂಸ್ಥಾಪಕ ಡಾ. ಶಾಮಪ್ರಸಾದ ಮುಖರ್ಜಿ ಅವರ 120 ನೇಯ ಜನ್ಮ ದಿನಾಚರಣೆಯ ಪ್ರಯುಕ್ತ, ಶಾಸಕ ಅಭಯ ಪಾಟೀಲ ಅವರು ದಿನಾಂಕ: 06-07-2021 ರ ವರೆಗೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ 120  ಸ್ಥಳಗಳಲ್ಲಿ ಲಸಿಕಾಕರಣದ ಕೇಂದ್ರಗಳನ್ನು ತೆರೆದು ಒಂದೇ ದಿನದಲ್ಲಿ  ಕ್ಷೇತ್ರದ 1 ಲಕ್ಷ 20 ಸಾವಿರ ಜನರಿಗೆ ವ್ಯಾಕ್ಸೀನ್ ಹಾಕಿಸಿ ಹೊಸ ದಾಖಲೆ ನಿರ್ಮಿಸುವ ಸಂಕಲ್ಪ ಮಾಡಿದ್ದಾರೆ. 
ಬೆಳಗಾವಿ ದಕ್ಷಿಣ ಮತಕ್ಷೇತ್ರಕ್ಕೆ 1ಲಕ್ಷ 20 ಸಾವಿರ ವ್ಯಾಕ್ಸೀನ್ ಡೋಸ್ ಗಳನ್ನು ಅಲೌಟ್ ಮಾಡಿಸುವುದಕ್ಕಾಗಿಯೇ ಬೆಂಗಳೂರಿಗೆ ತೆರಳಿದ ಅವರು ಕೂಡಲೇ ವ್ಯಾಕ್ಸೀನ್ ಗಳನ್ನು ಬೆಳಗಾವಿಗೆ ಡಿಸ್ಪ್ಯಾಚ್ ಮಾಡುವಂತೆ  ಉಪಮುಖ್ಯಮಂತ್ರಿಗಳು ಹಾಗೂ ಕೋವಿಡ್ ಟಾಸ್ಕ್ ಫೋರ್ಸ್ ಚೇರಮನ್ ಅಶ್ವತ್ಥ ನಾರಾಯಣ ಅವರಿಗೆ ಮನವಿ ಅರ್ಪಿಸಿದ್ದಾರೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಪ್ರತಿಯೊಬ್ಬರಿಗೂ ವ್ಯಾಕ್ಸೀನ್ ಕೊಡಿಸುವ ಗುರಿ ನನ್ನದಾಗಿದೆ. ಈ ವಿಚಾರದಲ್ಲಿ ಎಂದಿಗೂ ರಾಜಕಾರಣ ಮಾಡಿಲ್ಲ, ಮಾಡುವದೂ ಇಲ್ಲ, ಶಿಷ್ಟಾಚಾರದ ಪ್ರಕಾರ ಸಿಎಂ ಭಾವಚಿತ್ರ , ಸ್ಥಳೀಯ ಶಾಸಕರ ಭಾವಚಿತ್ರ ಮಾತ್ರ ಬಳಕೆ ಮಾಡಲಾಗುತ್ತಿದೆ. ಎಲ್ಲಿಯೂ ಪಕ್ಷದ ಧ್ವಜ ಬಳಕೆ ಮಾಡಿಲ್ಲ.ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲೂ ಅಲ್ಲಿಯ ಶಾಸಕರು ಅವರ ಭಾವಚಿತ್ರ ಬಳಿಸುತ್ತಿದ್ದಾರೆ. ನಾನು ಮಾಡಿದ ನಿರಂತರ ಪ್ರಯತ್ನದಿಂದಾಗಿಯೇ ಬೆಳಗಾವಿಗೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಕ್ಸೀನ್ ಬರುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವ್ಯಾಕ್ಸೀನ್  ಬೆಳಗಾವಿಗೆ ಕೊಡುವಂತೆ , ಡಿಸಿಎಂ ಅಶ್ವತ್ಥ ನಾರಾಯಣ ಅವರಿಗೆ ಮನವಿ ಮಾಡಿಕೊಂಡಿದ್ದೇನೆ ಹಾಗೂ   ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆಂದು  ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

Spread the love

About Laxminews 24x7

Check Also

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

Spread the love ನವದೆಹಲಿ: ಇತ್ತೀಚೆಗೆ ಕೃತಕ ಬುದ್ಧಿಮತ್ತೆ(ಎಐ) ಚಾಲಿತ ರೊಬೋಟ್‌ ಒಂದು ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿತ್ತು. ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ