ಚಿಕ್ಕೋಡಿ(ಬೆಳಗಾವಿ): ಜಿಲ್ಲೆಗೂ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ. ಇದಕ್ಕೆ ಸಾಕ್ಷಿ ಪ್ರಾಚೀನ ಕಾಲದಲ್ಲಿ ನಿರ್ಮಿಸಿರುವ ರಾಮಲಿಂಗೇಶ್ವರ ದೇವಸ್ಥಾನ.ಶ್ರೀ ರಾಮ ವನವಾಸದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಳಿಯ ಶಿಪ್ಪೂರ ಗ್ರಾಮಕ್ಕೆ ವಿಶ್ರಾಂತಿ ಪಡೆದು ಹೋಗಿದ್ದರು ಎನ್ನುವದಕ್ಕೆ ಇಲ್ಲಿನ ಶ್ರೀ ರಾಮಲಿಂಗೇಶ್ವರ ದೇವಸ್ಥಾನವೇ ಸಾಕ್ಷಿ. ಇಲ್ಲಿ ಸ್ವತಃ ಶ್ರೀ ರಾಮನು ಶಿವಲಿಂಗ ಸ್ಥಾಪಿಸಿ ಪೂಜೆ ಸಲ್ಲಿಸಿದ ಕಾರಣ ಈ ಕ್ಷೇತ್ರಕ್ಕೆ ಪೌರಾಣಿಕ ಕಥೆಯಿದೆ.
ಗುಡ್ಡಗಾಡಿನಲ್ಲಿ ಇದ್ದ ಈ ಪ್ರದೇಶದಲ್ಲಿ ಶ್ರೀ ರಾಮನಿಗೆ ಕುಡಿಯಲು ನೀರು ಸಿಗದ ಕಾರಣ ಬಾಣ ಬಿಟ್ಟು ಇಲ್ಲೊಂದು ಹೊಂಡ ನಿರ್ಮಿಸಿದ್ದಾರೆ. ಈ ಹೊಂಡದಲ್ಲಿ ವರ್ಷವಿಡೀ ಬರಗಾಲವಿದ್ದರೂ ನೀರು ಇರುತ್ತದೆ. ಈ ಹೊಂಡದ ನೀರನ್ನ ಪವಿತ್ರ ನೀರು ಎಂದು ಪೂಜಿಸುವ ಪ್ರತೀತಿ ಇದೆ.
ಶ್ರೀ ರಾಮನ ಭೇಟಿಯಿಂದ ಈ ಕ್ಷೇತ್ರ ಪುಣ್ಯ ಸ್ಥಳವಾಗಿ ಪರಿಣಮಿಸಿದೆ. ಗುಡ್ಡಗಾಡಿನಲ್ಲಿರುವ ಈ ಪವಿತ್ರ ಸ್ಥಳಕ್ಕೆ ಸಾವಿರಾರು ಭಕ್ತರು ಬಂದು ರಾಮಲಿಂಗೇಶ್ವರನ ದರ್ಶನ ಪಡೆದು ಪಾವನರಾಗುತ್ತಾರೆ.