ಶಿವಮೊಗ್ಗ: ಜಿಲ್ಲೆಯಲ್ಲಿ ಮೂರು ದಿನದಿಂದ ಮಳೆ ಕ್ಷೀಣಿಸಿದ್ದು, ಜಲಾಶಯಗಳ ಒಳಹರಿವು ಪ್ರಮಾಣವೂ ತಗ್ಗಿದೆ. ತುಂಗಾ ಜಲಾಶಯದ ಒಳಹರಿವು 15,414 ಕ್ಯುಸೆಕ್‍ಗೆ ಇಳಿಕೆಯಾಗಿದೆ.
ಜಲಾಶಯ ಈಗಾಗಲೇ ಭರ್ತಿ ಆಗಿರುವುದರಿಂದ, ಒಳ ಹರಿವಿನ ಪ್ರಮಾಣದಷ್ಟೇ ನೀರನ್ನು ಹೊಳೆಗೆ ಬಿಡಲಾಗುತ್ತಿದೆ. ಭದ್ರಾ ಜಲಾಶಯಕ್ಕೆ ಪ್ರಸ್ತುತ 9,581 ಕ್ಯುಸೆಕ್ ಒಳಹರಿವು ಇದೆ. ಹಾಗಾಗಿ, ಜಲಾಶಯದ ನೀರಿನ ಮಟ್ಟ 152.6 ಅಡಿಗೆ ಏರಿಕೆಯಾಗಿದೆ.
ಲಿಂಗನಮಕ್ಕಿ ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ಸಂಪೂರ್ಣ ತಗ್ಗಿದೆ. ಜಲಾಶಯಕ್ಕೆ 10,827 ಕ್ಯುಸೆಕ್ ಒಳಹರಿವು ಇದೆ. ಇದರಿಂದ ಡ್ಯಾಂನ ನೀರಿನ ಮಟ್ಟ 1785.70 ಅಡಿಗೆ ತಲುಪಿದೆ. ಕೊಡಗು ಜಿಲ್ಲೆಯಾದ್ಯಂತ ಮಳೆ ಅಬ್ಬರ ತಗ್ಗಿದ್ದು, ಕೆಲವೆಡೆ ಮಂಗಳವಾರ ಸಾಧಾರಣ ಮಳೆ ಸುರಿದಿದೆ.
Laxmi News 24×7