Breaking News

ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ಪಕ್ಕಾ : ಕುಮಟಳ್ಳಿ

Spread the love

ಅಥಣಿ: ರಮೇಶ್‌ ಜಾರಕಿಹೊಳಿ ಅವರು ಮಂತ್ರಿಯಾಗುವ ಎಲ್ಲ ಅರ್ಹತೆಯನ್ನು ಹೊಂದಿದ್ದು ಆರೋಪ ಮುಕ್ತರಾದ ಮೆಲೆ ಸಚಿವ ಸ್ಥಾನ ಪಕ್ಕಾ ಎಂದು ಅಥಣಿ ಶಾಸಕ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಟಳ್ಳಿ ಹೇಳಿದರು.

ಅವರು ತಾಲೂಕಿನ ಭರಮಖೋಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾಧ್ಯಮಗಳೊಂದಿಗೆ ಮಾತನಾಡಿ, ರಮೇಶ ಜಾರಕಿಹೊಳಿ ಒಬ್ಬ ನಾಯಕರು. ಭಾರತೀಯ ಜನತಾಪಕ್ಷದಲ್ಲಿ ಅವರಿಗೆ ಅಪಾರ ಗೌರವವಿದೆ. ಕೆಟ್ಟಗಳಿಗೆಯಲ್ಲಿ ಪ್ರಕರಣದ ತನಿಖೆ ನಡೆದಿದೆ. ಈ ಪ್ರಕರಣದಿಂದಾಗಿ ರಮೇಶ ಜಾರಕಿಹೊಳಿಯವರ ಮನಸ್ಸಿಗೆ ನೋವಾಗಿದೆ. ಜಾರಕಿಹೊಳಿ ಅವರು ಆರೋಪ ಮುಕ್ತರಾಗಿ ಹೊರಬರುತ್ತಾರೆ. ನಾವೆಲ್ಲರೂ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಬಂದಿದ್ದೆವೆ. ಮತ್ತೆ ರಮೇಶ್‌ ಅವರಿಗೆ ಮಂತ್ರಿ ಸ್ಥಾನ ದೊರೆತು ಅವರು ಪಕ್ಷದ ಸೇವೆ ಮಾಡಲಿದ್ದಾರೆ.

ರಮೇಶ್‌ ಜಾರಕಿಹೊಳಿ ಒಬ್ಬ ಉತ್ತಮ ಸಂಘಟನಾಕಾರರು. ಪಕ್ಷಕ್ಕೆ ಅವರ ಸೇವೆ ಬೇಕು. ಪಕ್ಷವನ್ನು 2023ರಲ್ಲಿ ಮತ್ತೆ ಅಧಿಕಾರಕ್ಕೆ ತರಬೇಕೆಂಬ ಉದ್ದೇಶದಿಂದ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ಪಕ್ಷದ ಹೈಕಮಾಂಡ್‌ ನಿರ್ಣಯಕ್ಕೆ ನಾವೆಲ್ಲ ಬದ್ಧ ಎಂದು ಶಾಸಕ ಮಹೇಶ್‌ ಕುಮಟಳ್ಳಿ ಹೇಳಿದರು. ಈ ವೇಳೆ ಮಲ್ಲಿಕಾರ್ಜುನ ಅಂದಾನಿ, ರಾಜು ಕುಮಟಳ್ಳಿ, ಸಂಕೋನಟ್ಟಿ ಗ್ರಾಪಂ ಸದಸ್ಯ ಪರಶುರಾಮ ಸೋನಕರ, ಎಂ.ಎನ್‌ ಜಮಖಂಡಿ , ಹಣಮಂತ ಅರ್ಧಾವೂರ, ಪಿಎಸ್‌ಐ ಕುಮಾರ ಹಾಡಕರ ಇತರರಿದ್ದರು.


Spread the love

About Laxminews 24x7

Check Also

ಅಧಿಕಾರ ದುರುಪಯೋಗ ಮಾಡಿಕೊಂಡು ನಕಲಿ ಎಸ್‌ಸಿ ಪ್ರಮಾಣ ಪತ್ರ ವಿತರಣೆ.

Spread the loveಅಥಣಿ: ಹಂಪವ್ವ ಶಿಂಗೆ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಅಧಿಕಾರಿಗಳು ಕೇವಲ 10 ಸಾವಿರ ಆದಾಯ ಪ್ರಮಾಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ