ಬೆಂಗಳೂರು: ಕರೊನಾ ಕಾರಣದಿಂದಾಗಿ ಮಧ್ಯಂತರದಲ್ಲೇ ನಿಲ್ಲಿಸಲಾಗಿದ್ದ ಬಿಗ್ಬಾಸ್ ಇದೀಗ ಮತ್ತೊಮ್ಮೆ ಸೆಕೆಂಡ್ ಇನ್ನಿಂಗ್ಸ್ ಮೂಲಕ ವೀಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಈಗಾಗಲೇ ಎಲ್ಲ ಸ್ಪರ್ಧಾಳುಗಳು ಮನೆ ತಲುಪಿದ್ದು ಕಲರ್ಸ್ ಕನ್ನಡ ವಾಹಿನಿ ಅದರ ವಿಟಿಯನ್ನೂ ತೋರಿಸಿದೆ. ಆದರೆ ಒಂದು ವಿಟಿಯಲ್ಲಿ ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ಹೊಡೆದಾಡಿಕೊಳ್ಳುತ್ತಿರುವ ದೃಶ್ಯವಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಈ ಹಿಂದೆ ಬಿಗ್ಬಾಸ್ ನೋಡಿದಾಗ ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಸ್ನೇಹಿತರಂತೆಯೇ ಕಾಣಿಸಿಕೊಂಡಿದ್ದಾರೆ. ಆದರೆ ಸೆಕೆಂಡ್ ಇನ್ನಿಂಗ್ಸ್ ಸಂಪೂರ್ಣವಾಗಿ ಬೇರೆಯದ್ದೇ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ಮನೆಯೊಳಗೆ ಎಂಟ್ರಿ ಕೊಟ್ಟ ಅವರಿಬ್ಬರು ಕುಸ್ತಿ ಮಾಡಿಕೊಳ್ಳಲಾರಂಭಿಸಿದ್ದಾರೆ. ಆದರೆ ಇದು ಯಾವ ಕಾರಣಕ್ಕೆ ಎನ್ನುವುದು ಮಾತ್ರ ವೀಕ್ಷಕರಿಗೆ ಕಾಡಲಾರಂಭಿಸಿರುವ ಪ್ರಶ್ನೆಯಾಗಿದೆ.
ಇಬ್ಬರು ದಿವ್ಯಾಗಳ ಮಧ್ಯೆ ಸ್ನೇಹ ಮುರಿದುಬಿದ್ದಿರುವುದಕ್ಕೆ ಮತ್ತೊಂದು ವಿಟಿ ಸಾಕ್ಷಿಯಾಗಿದೆ. ಮನೆಗೆ ಬಂದ ಮೊದಲನೇ ದಿನವೇ ನಾಮಿನೇಷನ್ ನಡೆದಿದ್ದು ಅದರಲ್ಲಿ ದಿವ್ಯಾ ಉರುಡುಗ, ದಿವ್ಯಾ ಸುರೇಶ್ರನ್ನೇ ನಾಮಿನೇಟ್ ಮಾಡಿದ್ದಾರೆ. ಆಕೆ ನನ್ನ ನಗುವನ್ನು ಫೇಕ್ ನಗು ಎಂದಿದ್ದಾಳೆ ಎನ್ನುವ ಕಾರಣವನ್ನೂ ಕೊಟ್ಟಿದ್ದಾರೆ. ಹಾಗಾದರೆ ಆ ಫೈಟ್ ಕೂಡ ನಿಜವೇ ಇರಬೇಕು ಎನ್ನಲಾರಂಭಿಸಿದ್ದಾರೆ ಬಿಬಿ ಅಭಿಮಾನಿಗಳು. ಇಂದು ಸಂಜೆ 6 ಗಂಟೆಗೆ ಬಿಗ್ಬಾಸ್ ಮಹಾಸಂಚಿಕೆ ಆರಂಭವಾಗಲಿದ್ದು ಈ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ.