ಬೆಳಗಾವಿ:-ಸ್ಥಳೀಯ ಲಕ್ಷ್ಮೀ ನಗರದ ಯುವಕ ಗಿರೀಶ ಸದಾಶಿವ ಬಿಳ್ಳೂರ ಎನ್ ಡಿಎ ಪರೀಕ್ಷೆ ಪಾಸಾಗಿದ್ದು, ವಾಯು ಸೇನೆಯ ಪ್ಲಾಯಿಂಗ್ ಆಪೀಸರ್( ಫೈಟರ್ ಪೈಲಟ್) ಹುದ್ದೆಯನ್ನು ಅಲಂಕರಿಸಲಿದ್ದಾರೆ. ಸೇನಾಧಿಕಾರಿಗಳ ಸ್ಪರ್ಧಾತ್ಮಕ ಪರೀಕ್ಷೆ ಗಿರೀಶ ಆಯ್ಕೆಯಾಗಿದ್ದು, ಶೀಘ್ರವೇ ಹೈದರಾಬಾದಿನ ದುಂಡಿಗಲ್ ಕೇಂದ್ರದಲ್ಲಿ ತರಬೇತಿ ಪಡೆದು, ಬಿದರನ ವಾಯು ನೆಲೆಯಾದ ಹೌಕ್ಸ್ (ಹಕೀಂ ಪೇಠ) ಪ್ರಥಮ ಸೇವೆ ಸಲ್ಲಿಸಿದ್ದಾರೆ. ಶನಿವಾರ ಹೈದರಾಬಾದನಲ್ಲಿ ಜರುಗಿದ ವಾಯು ಸೇನೆಯ ಉನ್ನತಾಧಿಕಾರಿಗಳ ತರಬೇತಿ ಕೇಂದ್ರದಲ್ಲಿ ದೇಶದ ಸೇನೆಯಲ್ಲಿಯ ಉನ್ನತ ಹುದ್ದೆಗೆರಿದರು. ಸ್ಪಧಾತ್ಮಕ ಯುಗದಲ್ಲಿ ಕಿರಿಯ ವಯಸ್ಸಿನಲ್ಲಿ ಉನ್ನತ ಸ್ಥಾನ ಪಡೆದು ಇತರರಿಗೂ ಮಾದರಿಯ ಯುವಕರಾಗಿದ್ದಾರೆ. ಯುವಕನಿಗೆ ದೇಶ ಸೇವೆ ಸಲ್ಲಿಸಲು ಉನ್ನತ ಹುದ್ದೆ ಸಿಕ್ಕಿದೆ. ಹಿನ್ನೆಲೆ: ತಂದೆ ಸದಾಶಿವ ಬಿಳ್ಳೂರ ಹುಣಶ್ಯಾಳ (ಪಿ.ವಾಯ್)ನ ಪಿಕೆಪಿಎಸ್‍ದಲ್ಲಿ ಮುಖ್ಯ ಕಾರ್ಯನಿರ್ವಾಹಕರಾಗಿದ್ದು, ತಾಯಿ ಶೋಭಾತಾಯಿ ಪಾಟೀಲ ಇವರು ಸಮೀಪದ ಹಳ್ಳೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರದಲ್ಲಿ ಪ್ರಧಾನ ಗುರುಮಾತೆಯಾಗಿದ್ದಾರೆ. 1 ರಿಂದ 5 ನೇ ತರಗತಿಯವರೆಗೆ ನಾಗನೂರಿನ ಚೈತನ್ಯ ಆಶ್ರಮ ವಸತಿ ಶಾಲೆಯಲ್ಲಿ ಪೂರೈಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜಯಪೂರ ಸೈನಿಕ ಶಾಲೆಗೆ ಆಯ್ಕೆಯಾಗಿ ಪಿಯುಸಿವರೆಗೆ ವ್ಯಾಸಂಗಮಾಡಿದ್ದಾರೆ. ಪಿಯುಸಿ ದ್ವಿತೀಯ ವರ್ಷದಲ್ಲಿದ್ದಾಗ ಭಾರತೀಯ ಸೇನೆ ನಡೆಸುವ ನ್ಯಾಷನಲ್ ಡಿಪೆನ್ಸ ಆಕ್ಯಾಡೆಮಿ ನಡುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ತೇರ್ಗಡಿ ಹೊಂದಿದ್ದಾರೆ. ಪೂಣೆಯ ಖಡಕ್ವಾಸಲಾದಲ್ಲಿ 3 ವರ್ಷ ಪ್ರಾಥಮಿಕ ಹಂತದ ಸೇನಾ ತರಭೇತಿ ಪಡೆದು, 1 ವರ್ಷದ ವೈಮಾನಿಕ ತರಬೇತಿ ಮುಗಿಸಿದ್ದಾನೆ. ಕಿರಿಯ ವಯಸ್ಸಿನಲ್ಲಿ ದೇಶ ಸೇವೆಯ ಜವಾಬ್ದಾರಿ ಹೊತ್ತು ಇತರ ಯುವಕರರಿಗೂಸ್ಪೂರ್ತಿಯಾಗಿದ್ದಾರೆ. ಮೂಡಲಗಿ ಬಿಇಒ ಅಜೀತ ಮನ್ನಿಕೇರಿ, ಚಿಕ್ಕೋಡಿ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಮ್ ಲೋಕನ್ನವರ, ಚೈತನ್ಯ ವಸತಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ಸಿಬ್ಬಂದಿ ವರ್ಗ ಹರ್ಷವ್ಯಕ್ತಪಡಿಸಿದ್ದಾರೆ.
![](https://laxminews24x7.com/wp-content/uploads/2021/06/98c32cb3107fc00f4e67028f560affcce08bd2bf7d382b7785a0b6b43bf38dfd-642x330.jpg)