ಬೆಳಗಾವಿ : ಕೋವಿಡ್ ಮಹಾಮಾರಿಗೆ ಹೆದರಿ ಜನರು ತಮ್ಮ ಮನೆಗಳಿಂದ ಹೊರಗೆ ಬರಲು ಹಿಂದೆ ಮುಂದೆ ನೋಡುತ್ತಿರುವ ಈಗಿನ ಪರಿಸ್ಥಿತಿಯಲ್ಲಿ ಮೇದಾರ ಸಮಾಜದ ಹಿತೈಸಿಗಳಾದ ನಾಗೇಶ ಹಾಗೂ ಅರ್ಜುನ ಕಡೋಲಿ ಸಹೋದರರು ಕೊರೋನಾಗೂ ಹೆದರದೆ ತಮ್ಮ ಕಾಲಿಗೆ ಚಕ್ರ ಕಟ್ಟಿಕೊಂಡ ಹಾಗೆ ಓಡಾಡಿ ಬಡತನದ ಅಲೆಗೆ ಸಿಲುಕಿ ಸಂಕಷ್ಟ ಅನುಭವಿಸುತ್ತಿರುವ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ಗಳನ್ನು ವಿತರಿಸುತ್ತಿದ್ದಾರೆ.ಕಳೆದ ಕೆಲ ದಿನಗಳಿಂದ ಬೆಳಗಾವಿ ಜಿಲ್ಲೆಯ ವಿವಿಧ ಊರುಗಳಿಗೆ ಭೇಟಿ ನೀಡಿ ಅಲ್ಲಿರುವ ಮೇದಾರ ಸಮಾಜದ ಬಡ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ಗಳನ್ನು ವಿತರಿಸಿ ಕೈಲಾದಷ್ಟು ಅಳಿಲು ಸೇವೆ ಸಲ್ಲಿಸಿದ್ದಾರೆ.ಅದೇ ರೀತಿ ಶನಿವಾರ ದಂದು ಬೆಳಗಾವಿ ನಗರದಲ್ಲಿರುವ ಬುರುಡ ಕಾಲೋನಿಗೆ ತೆರಳಿ ಮನೆಯ ಯಜಮಾನನನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಹಾಗೂ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಆಹಾರ ಧಾನ್ಯ ಕಿಟ್ ಗಳನ್ನು ವಿತರಿಸಿ ತಮ್ಮ ಸಮಾಜ ಮೇಲಿರುವ ಪ್ರೇಮವನ್ನು ಮೆರೆದಿದ್ದಾರೆ.
ಬೆಳಗಾವಿ ನಗರದಲ್ಲಿ ಬಿದಿರು,ಬಾಂಬು,ನೀಲಗಿರಿಯ ಬೇಡಿಕೆ ಹೆಚ್ಚಾಗಿ ಇರದ ಕಾರಣ ಮೇದಾರ ಸಮುದಾಯದವರು ಬಿದಿರು,ಬಾಂಬು,ನೀಲಗಿರಿ ವ್ಯಾಪಾರ ಮಾಡುವುದಿಲ್ಲ.ಆದ್ದರಿಂದ ಕೆಲವರು ಪೆಂಡಾಲ್ ಕೆಲಸ ಮಾಡಿದರೆ ಉಳಿದ ಅತಿ ಹೆಚ್ಚು ಜನರು ಬುಟ್ಟಿ ಮಾರಾಟದ ಮೇಲೆ ಅವಲಂಬಿತರಾಗಿದ್ದಾರೆ.ಆದರೆ ಕೋವಿಡ್ ನಿಂದ ರಾಜ್ಯದಲ್ಲಿ ಜಾರಿ ಇರುವ ಲಾಕ್ ಡೌನ್ ನಿಂದಾಗಿ ಬುಟ್ಟಿ ವ್ಯಾಪಾರ ಹಾಗೂ ಪೆಂಡಾಲ್ ಕೆಲಸ ಸ್ಥಗಿತಗೊಂಡಿದೆ. ಆದಕಾರಣ ಇಲ್ಲಿ ವಾಸಿಸುವ ಹೆಚ್ಚು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.ಈ ಸಂದರ್ಭದಲ್ಲಿ ಸಮಾಜದ ಹಿತೈಸಿಗಳಾದ ನಾಗೇಶ ಹಾಗೂ ಅರ್ಜುನ ಕಡೋಲಿ ಸಹೋದರರು ತಮ್ಮ ಸ್ವ ಜಿಲ್ಲೆಯ ಜನರ ಕಷ್ಟಗಳನ್ನು ಅರೆತು ಅವರ ಸಹಾಯಕ್ಕೆ ಮುಂದಾಗಿದ್ದಾರೆ.
ನಾವು ನಮ್ಮ ಕುಟುಂಬ ಸುಖವಾಗಿದ್ದರೆ ಸಾಕು ಅನ್ನುವವರೇ ಹೆಚ್ವಿರುವ ನಮ್ಮ ಸುತ್ತಮುತ್ತದಲ್ಲಿ ನಮ್ಮ ಸಮಾಜದವರೂ ಕೂಡ ಸುಖವಾಗಿರಬೇಕು ಎಂಬ ಭಾವನೆ ಕಡೋಲಿ ಸಹೋದರದಾಗಿದ್ದರಿಂದ ಸಮಾಜದ ಜನರ ಕಷ್ಟಗಳನ್ನು ಅರೆತು ಅವರಿಗೆ ಕೈಲಾದಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಜನರ ಸಂಕಷ್ಟಕ್ಕೆ ಕೈ ಜೋಡಿಸಿದರೆ ಅದೇ ನಾವು ನಮ್ಮ ಸಮಾಜಕ್ಕೆ ಕೊಡುವ ದೊಡ್ಡ ಕೊಡುಗೆ ಅನ್ನೊದು ಕಡೋಲಿ ಸಹೋದರರ ಅಭಿಪ್ರಾಯವಾಗಿದೆ.
ಹಲವಾರು ವರ್ಷಗಳಿಂದ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿರುವ ನಾಗೇಶ ಹಾಗೂ ಅರ್ಜುನ ಕಡೋಲಿ ಸಹೋದರರು ಬೆಳಗಾವಿ ಜಿಲ್ಲೆಯಲ್ಲಿ ವಾಸಿಸುವ ಮೇದಾರ ಸಮಾಜದ ಜನರ ಪರಿಸ್ಥಿತಿಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಕೈ ಕಟ್ಟಿ ಕುಳಿತರೆ ನಮ್ಮ ಸಮಾಜಕ್ಕೆ ನಾವು ದ್ರೋಹ ಮಾಡಿದಂಗೆ ಆಗುತ್ತದೆ ಎಂದು ನಾವು ನಮ್ಮ ಸಮಾಜದ ಜನರ ಕಷ್ಟಕ್ಕೆ ಸ್ಪಂದಿಸಲು ಮುಂದಾಗಿದ್ದೆವೆ.ಈ ಕಾರ್ಯಕ್ಕೆ ನನ್ನ ಸಹೋದರ ಸೇರಿದಂತೆ ನನ್ನ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರ ಸಹಕಾರ ದೊರೆತ್ತಿರುವುದು ಆನೆ ಬಲ ಬಂದಂತಾಗಿದೆ ಎಂದು ನಮ್ಮ ಸುದ್ದಿ ವಾಹಿನಿ ಜೊತೆ ನಾಗೇಶ ಕಡೋಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.