ಬೆಂಗಳೂರು: ರಾಜ್ಯದಲ್ಲಿ ಮುಂಗಾರುಮಳೆ ಕುರಿತು ಇಂದು ಸುದ್ದಿಗೋಷ್ಠಿ ಮುಗಿಸಿ ಹೊರಡುವ ವೇಳೆ ಸಿಎಂ ಬಿ.ಎಸ್. ಯಡಿಯೂರಪ್ಪ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಗೆ ಪಾಠ ಮಾಡಿದ ವಿಶೇಷ ಸನ್ನಿವೇಶ ನಡೆಯಿತು. ಈ ವೇಳೆ ಸಿಎಂ ಬಿಎಸ್ವೈ ಜಾಲಿ ಮೂಡ್ನಲ್ಲಿದ್ದಂತೆ ಕಂಡುಬಂದರು..
ಸಿಎಂ ಬಿಎಸ್ವೈ, ಆರ್ ಅಶೋಕ್ ಹಾಗೂ ಸವದಿ ನಡುವಿನ ಮಾತುಕತೆ ಹೀಗಿತ್ತು..
ಸಿಎಂ :- ಅಶೋಕ್ ಎಲ್ಲಿಗೆ ಹೋಗ್ತಾಯಿದ್ಯಾ?.
ಅಶೋಕ್ :- ಸಾರ್ ನಮ್ಮದೊಂದು ಕೇಸ್ ಇದೆ. ಲಾಯರ್ ಬಂದಿದ್ದಾರೆ. ಅಲ್ಲಿಗೆ ಹೋಗ್ತಾಯಿದ್ದೀನಿ.
ಸಿಎಂ :- ಯಾರದ್ದು ಕೇಸ್?
ಅಶೋಕ್ :- ಇಲ್ಲ ಸಾರ್, ಇಲ್ಲೇ ಮನೆಗೆ ಹೋಗ್ತಾಯಿದ್ದೀನಿ.
ಸಿಎಂ :- ನಿನ್ನ ಮೇಲೆ ಯಾರು ಕೇಸ್ ಹಾಕ್ತಾರೋ? ಇನ್ನು ಸವದಿ ಮೇಲೆ ಕೇಸ್ ಹಾಕ್ತಾರೆ ಅಂದ್ರೆ, ಒಪ್ಪಬಹುದು! ಅಶೋಕ್ :- ಹೌದು ಸಾರ್, ಸವದಿ ಇತ್ತೀಚೆಗೆ ದಾರಿ ತಪ್ಪುತ್ತಿದ್ದಾನೆ.
ಸಿಎಂ :- ಅದೇ ಸವದಿನ ಕಾಪಾಡೋದು ನಿನ್ನ ಕೆಲಸ ಅಲ್ವೇ? ಅವನನ್ನು ಕಾಪಾಡಬೇಕಾಗಿದ್ದು, ನಿನ್ನ ಕರ್ತವ್ಯ ಅಲ್ಲವೇ?
ಸವದಿ :- ಸಾಹೇಬ್ರೇ, ಕೇಸ್‌ಗೆ ಲಾಯರ್ ಫೀ ಯಾರು ಕೊಡಬೇಕು?
ಸಿಎಂ :- ಸವದಿನಾ ಕಾಪಾಡಪ್ಪ ಅಶೋಕ್.
ಅಶೋಕ್ :- ಆಗಲೀ ಸಾರ್.
ಹೀಗೆ ಜಾಲಿ ಮೂಡ್‌ನಲ್ಲಿ ಹೇಳಿ ನಗುತ್ತಾ ಸಿಎಂ ಯಡಿಯೂರಪ್ಪ ಮನೆ ಕಡೆ ಹೊರಟರು.