ಹಾಸನ: ಮನೆಯ ಕಾಂಪೌಂಡ್ನಲ್ಲಿದ್ದ ಸಾಕುನಾಯಿಯನ್ನು ಚಿರತೆ ಹೊತ್ತೊಯ್ದಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಭೈರನಾಯಕನಹಳ್ಳಿಯಲ್ಲಿ ನಡೆದಿದೆ.
ತಡರಾತ್ರಿ 2.30ರ ಸಮಯದಲ್ಲಿ ಗ್ರಾಮದೊಳಗೆ ಬಂದಿರುವ ಚಿರತೆ ಗರುಡನಗಿರಿ ರಸ್ತೆಯ ಮಲ್ಲೇಗೌಡ ಎಂಬುವವರ ಮನೆಯ ಕಾಂಪೌಂಡ್ ಒಳಗೆ ಮಲಗಿದ್ದ ನಾಯಿಯನ್ನು ಎಳೆದೊಯ್ದಿದೆ. ಬೆಳಗ್ಗೆ ನಾಯಿ ಕಾಣಿಸದಿದ್ದಾಗ ಮಲ್ಲೇಗೌಡರು ಸಿಸಿಟಿವಿ ಪರಿಶೀಲಿಸಿದ್ದಾರೆ. ಚಿರತೆ ನಾಯಿಯನ್ನು ಹೊತ್ತೊಯ್ಯವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಿರತೆ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಹಾಗಾಗಿ ಕೂಡಲೇ ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Laxmi News 24×7