Breaking News

38 ಹೆಂಡ್ತಿಯರ ಮುದ್ದಿನ ಗಂಡ, 89 ಮಕ್ಕಳ ತಂದೆ ಇನ್ನಿಲ್ಲ! ಇವರ ವೈವಾಹಿಕ ಬದುಕೇ ಕುತೂಹಲ

Spread the love

ಮಿಜೋರಾಂ: ಬರೋಬ್ಬರಿ 38 ಮಹಿಳೆಯರನ್ನು ಮದುವೆ ಆಗಿದ್ದ, 89 ಮಕ್ಕಳಿಗೆ ಜನ್ಮ ನೀಡಿದ್ದ, 33 ಮೊಮ್ಮಕ್ಕಳ ಅಜ್ಜ ಜಿಯೋನಾ ಚನಾ ಭಾನುವಾರ ನಿಧನರಾದರು.

ಜಗತ್ತಿನ ಅತಿದೊಡ್ಡ ಕುಟುಂಬದ ವಾರಸ್ದಾರ ಎಂದೇ ಗುರುತಿಸಿಕೊಂಡಿದ್ದ ಜಿಯೋನಾ ಚನಾರ ವೈವಾಹಿಕ ಬದುಕೇ ಎಲ್ಲರಿಗೂ ಕುತೂಹಲ ಮೂಡಿಸಿತ್ತು. ಪತ್ನಿ, ಮಕ್ಕಳು, ಮೊಮ್ಮಕ್ಕಳು ಸೇರಿ 181 ಸದಸ್ಯರನ್ನ ಹೊಂದಿತ್ತು ಜಿಯೋನಾ ಕುಟುಂಬ. ಮಿಜೋರಾಂನ ಬಕ್ತಾಂಗ್​ನಲ್ಲಿ ಜಿಯಾನ್​ರ ನಾಲ್ಕಂತಸ್ತಿನ ಆಕರ್ಷಕ ಬಂಗಲೆ ಇದೆ. ಅಲ್ಲಿಯೇ ಜಿಯೋನಾ ವಾಸವಿದ್ದರು. ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು.

 

 

ಜಿಯೋನ್​ರ ಅಜ್ಜ 1942ರಲ್ಲಿ ಹಮಾಂಗ್‌ಕಾವ್​​ನ ಹಳ್ಳಿಯಿಂದ ಬಂದು ಐಜಾಲ್​​ನಲ್ಲಿ ನೆಲೆಸಿದ್ದರು. ಅಂದಿನಿಂದ ಇವರ ಕುಟುಂಬ ಅಲ್ಲೇ ನೆಲೆಸಿದೆ. ಖುವಾಂಗ್ತುಹಾ ಎಂಬ ಪಂಥದಲ್ಲಿ ಬಹುಪತ್ನಿತ್ವ ಪದ್ಧತಿಯಿದೆ. ಹಾಗಾಗಿ ಜಿಯೋನ್​ 39 ಮಹಿಳೆಯರನ್ನು ಮದುವೆ ಆಗಿದ್ದರು. ಇದು ಭಾರಿ ಸುದ್ದಿಯಾಗಿತ್ತು. ಒಬ್ಬರನ್ನ ಮದುವೆ ಆಗಿ ಸಂಬಾಳಿಸೋದೆ ಸಾಕು ಸಾಕು ಅನ್ನಿಸುತ್ತೆ ಎಂದು ಬಹುತೇಕು ಮೂದಲಿಸುತ್ತಿದ್ದಾರೆ. ಆದರೆ ಜಿಯೋನಾ ಮಾತ್ರ ಅದ್ಹೇಗೆ 38 ಹೆಂಡ್ತಿಯರನ್ನ ಸಂಬಾಳಿಸಿ ಇಷ್ಟು ವರ್ಷ ಜೀವನ ನಡೆಸಿದ್ರು! ಎಂದು ಹಲವರು ಆಶ್ವರ್ಯ ವ್ಯಕ್ತಪಡಿಸಿದ್ದರು.

ಮಧುಮೇಹ​ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಜಿಯೋನ್​ರ ಆರೋಗ್ಯ ಇತ್ತೀಚಿಗೆ ಹದಗೆಟ್ಟಿತ್ತು. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಇವರ ನಿಧನಕ್ಕೆ ಮಿಜೋರಾಂನ ಸಿಎಂ ಸಂತಾಪ ಸೂಚಿಸಿದ್ದಾರೆ.


Spread the love

About Laxminews 24x7

Check Also

ವಿದ್ಯಾರ್ಥಿನಿಯರನ್ನು ಸ್ವಂತಖರ್ಚಲ್ಲಿ ಸಂಸತ್ ಕಲಾಪ ವೀಕ್ಷಣೆಗೆ ಕರೆದೊಯ್ಯುವ ಸಂಸದೆ

Spread the love ವಿದ್ಯಾರ್ಥಿನಿಯರನ್ನು ಸ್ವಂತಖರ್ಚಲ್ಲಿ ಸಂಸತ್ ಕಲಾಪ ವೀಕ್ಷಣೆಗೆ ಕರೆದೊಯ್ಯುವ ಸಂಸದೆ (ಬೆಳಗಾವಿ ಜಿಲ್ಲೆ): ಚಿಕ್ಕೋಡಿ ಸಂಸದೆ ಪ್ರಿಯಾಂಕಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ