Breaking News

ಬಿಜೆಪಿಯವರು ವ್ಯಾಪಾರಸ್ಥರು; ಕೇಂದ್ರ ಸರ್ಕಾರ ಜನರ ರಕ್ತ ಹೀರುವ ಕಾರ್ಯ ಮಾಡುತ್ತಿದೆ- ಉಮಾಶ್ರೀ

Spread the love

ಬನಹಟ್ಟಿ: ತೈಲ ಬೆಲೆ ಹಾಗೂ ಅದರ ಉತ್ಪನ್ನಗಳ ಬೆಲೆಗಳ ಏರಿಕೆಯಿಂದಾಗಿ ದೇಶದ ರೈತರು, ವ್ಯಾಪಾರಸ್ಥರು ಕೂಲಿ ಕಾರ್ಮಿಕರು ದಾರುಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಇವರೆಲ್ಲರ ಮೇಲೆ ಕಾಳಜಿ ಇಲ್ಲ. ಕೇಂದ್ರ ಸರ್ಕಾರದವರು ಸೇವಕರಲ್ಲ, ಅವರು ವ್ಯಾಪಾರಿಗಳು. ಅವರು ಜನರ ರಕ್ತ ಹೀರುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವೆ ಹಾಗೂ ರಾಜ್ಯ ಕಾಂಗ್ರೆಸ್ ವಕ್ತಾರರಾದ ಉಮಾಶ್ರೀ ಆರೋಪಿಸಿದರು.

ಅವರು ಶನಿವಾರ ಬನಹಟ್ಟಿಯ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಕೆಪಿಸಿಸಿ ಆದೇಶದ ಮೇರೆಗೆ ತೈಲ ಬೆಲೆಗಳ ಉತ್ಪನ್ನಗಳ ಬೆಲೆಯ ಹೆಚ್ಚಳವನ್ನು ಖಂಡಿಸಿ ಇದೇ ೧೩ ರಂದು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಾಗೂ ೧೪ ರಂದು ಪ್ರತಿಯೊಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೆಟ್ರೊಲ್ ಬಂಕ್‌ಗಳ ಮುಂದೆ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಒಂದು ಬ್ಯಾರಲ್ಗೆ 109 ಡಾಲರ್ ಇತ್ತು. ದೇಶದಲ್ಲಿ ಪೆಟ್ರೊಲ್ ಬೆಲೆ ಕಡಿಮೆಯ ಇತ್ತು. ಇಂದು 70 ಡಾಲರ್ ಇದೆ. ಆದರೆ ಭಾರತದಲ್ಲಿ ಪೆಟ್ರೊಲ್ ಬೆಲೆ ರೂ.100 ಕ್ಕೆ ಬಂದು ನಿಂತಿದೆ. ತೈಲ ಬೆಲೆಯ ಹೆಚ್ಚಳದಿಂದಾಗಿ ಕೇಂದ್ರ ಸರ್ಕಾರ ಜನರಿಗೆ ಅನ್ಯಾಯ, ಮೋಸ ಹಾಗೂ ದೇಶದ್ರೋಹದ ಕಾರ್ಯವನ್ನು ಮಾಡುತ್ತಿದೆ. ಕೋವಿಡ್ನಿಂದಾಗಿ ಜನರು ತೊಂದರೆಯಲ್ಲಿದ್ದಾಗ ತೈಲ ಬೆಲೆ ಹೆಚ್ಚಳ ಮತ್ತಷ್ಟು ಸಂಕಷ್ಟಕ್ಕೆ ಗುರಿ ಮಾಡಿದೆ.

ಆದ್ದರಿಂದ ಕೇಂದ್ರ ಸರ್ಕಾರ ಅದಷ್ಟು ಬೇಗನೆ ತೈಲ ಉತ್ಪನ್ನಗಳ ಬೆಲೆಯನ್ನು ಕಡಿಮೆ ಮಾಡಬೇಕು ಎಂಬುದು ಕಾಂಗ್ರೆಸ್ ಪಕ್ಷದ ಆಗ್ರಹವಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ನೀಲಕಂಠ ಮುತ್ತೂರ, ರಾಜೇಂದ್ರ ಭದ್ರನವರ, ಬಸವರಾಜ ಕೊಕಟನೂರ, ಈರಯ್ಯ ಮಠಪತಿ, ಅಶೋಕ ಉಳ್ಳಾಗಡ್ಡಿ, ಶಿವಕುಮಾರ ಪಾಟೀಲ, ದುಂಡಪ್ಪ ಮಾಸ್ಟರ್, ಭರಮು ಉಳ್ಳಾಗಡ್ಡಿ, ಹಾರೂನ್ ಸಾಂಗ್ಲಿಕರ್, ಹಾರೂನ್ ಬೇವೂರ, ರಾಹುಲ ಕಲಾಲ, ಕಿರಣ ಕರಲಟ್ಟಿ, ಬಸವರಾಜ ಗುಡೋಡಗಿ, ಸೇರಿದಂತೆ ತೇರದಾಳ ಮತಕ್ಷೇತ್ರದ ವಿವಿಧ ನಗರ ಮತ್ತು ಗ್ರಾಮೀಣ ಪ್ರದೇಶದ ಕಾರ್ಯಕರ್ತರು ಇದ್ದರು.


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ