Breaking News

ಆರೋಪಿ ನರೇಶ್ ಹಾಗೂ ಶ್ರವಣ್ ಇದೀಗ ಎಸ್ ಐಟಿ ವಿಚಾರಣೆಗೆ ಹಾಜರ

Spread the love

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ ಗೆ ಸಂಬಂಧಿಸಿದಂತೆ ಕಿಂಗ್ ಪಿನ್ ಗಳೆಂದೇ ಆರೋಪಿಸಲಾಗುತ್ತಿರುವ ನರೇಶ್ ಹಾಗೂ ಶ್ರವಣ್ ಇದೀಗ ಎಸ್ ಐಟಿ ವಿಚಾರಣೆಗೆ ಹಾಜರಾಗಿದ್ದಾರೆ.

ಸಿಡಿ ಪ್ರಕರಣ ಬಹಿರಂಗವಾದಾಗಿನಿಂದ ಕಳೆದ 100 ದಿನಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಗಳು ಇದೀಗ ಬೆಂಗಳೂರಿನ ಆಡುಗೋಡಿ ಎಸ್ ಐಟಿ ಟೆಕ್ನಿಕಲ್ ಸೆಲ್ ಗೆ ವಿಚಾರಣೆಗೆ ಹಾಜರಾಗಿದ್ದಾರೆ. ನರೇಶ್ ಹಾಗೂ ಶ್ರವಣ್ ವಿರುದ್ಧ ರಮೇಶ್ ಜಾರಕಿಹೊಳಿ ಹನಿ ಟ್ರ್ಯಾಪ್, ಬ್ಲ್ಯಾಕ್ ಮೇಲ್ ಸೇರಿದಂತೆ ದೂರು ದಾಖಲಿಸಿದ್ದರು.

ಸಿಡಿ ಕೇಸ್ ನಲ್ಲಿ ಬಂಧನ ಭೀತಿಯಲ್ಲಿದ್ದ ನರೇಶ್ ಹಾಗೂ ಶ್ರವಣ್ ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದರು. ಷರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಿದ್ದ ನ್ಯಾಯಾಲಯ 5 ದಿನಗಳಲ್ಲಿ ಎಸ್ ಐಟಿ ವಿಚಾರಣೆಗೆ ಹಾಜರಾಗುವಂತೆ ಆದೇಶ ನೀಡಿತ್ತು.


Spread the love

About Laxminews 24x7

Check Also

ಒಳಮೀಸಲಾತಿ ಕುರಿತು ಇದೆ 27ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಆಹಾರ ಸಚಿವ:- ಕೆಹೆಚ್. ಮುನಿಯಪ್ಪ

Spread the loveಬೆಂಗಳೂರು: ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ‌ ಹಾಗೂ ಅಬಕಾರಿ ಸಚಿವರಾದ ಆರ್ .ಬಿ.ತಿಮ್ಮಾಪುರ ರವರ ನೇತೃತ್ವದಲ್ಲಿ ನಿಯೊಗವು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ