ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಜಮ್ಮಲದಿನ್ನಿ ಕ್ರಾಸ್ ಬಳಿ ಇರುವ ಸೆತುವೆ ಪೈಪ್ ನಲ್ಲಿ ಅಪರಿಚಿತ ಯುವತಿಯ ಶವ ಪತ್ತೆ ಆಗಿದೆ.
ಸುಮಾರು 18 ವಯಸ್ಸಿನ ಯುವತಿಯ ಕತ್ತಿಗೆ ವೇಲ್ ನಿಂದ ಬಿಗಿದು, ತಲೆ ಮೇಲೆ ಕಲ್ಲು ಎತ್ತಿಹಾಕಿದಂತೆ ತಲೆಗೆ ಭಾರಿ ಪೆಟ್ಟು ಬಿದ್ದು ರಕ್ತಸ್ರಾವ ಆಗಿದೆ. ಸ್ಥಳದಲ್ಲಿನ ಸ್ಥಿತಿಯನ್ನು ಆಧರಿಸಿ ಪೊಲೀಸರು ಪ್ರಾಥಮಿಕ ಹಂತದಲ್ಲಿ ಇದು ಕೊಲೆ ಎಂದು ಶಂಕಿಸಿದ್ದಾರೆ.
ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿರುವ ಮುದ್ದೇಬಿಹಾಳ ಸಿಪಿಐ, ತಾಳಿಕೋಟೆ ಪಿಎಸೈ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಹೆಚ್ಚಿನ ತನಿಖೆಗಾಗಿ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳದ ತಜ್ಞರನ್ನು ಕರೆಸಲು ಸಿದ್ದತೆ ನಡೆಸಿದ್ದಾರೆ.
Laxmi News 24×7