ದಾವಣಗೆರೆ: ಪ್ರಿಯಕರನ ವಂಚನೆಯಿಂದ ಬೇಸತ್ತ ಪ್ರೇಮಿ ನೇಣು ಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಭಾನುವಾರ ದಾವಣಗೆರೆಯ ಭಾರತ್ ಕಾಲೋನಿಯಲ್ಲಿ ನಡೆದಿದೆ.
ಭಾರತ್ ಕಾಲೋನಿಯ ಆಶಾ(22) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಆಶಾ ಕೆ.ಬಿ. ಈರಣ್ಣ ಎಂಬಾತತನ್ನು ಪ್ರೀತಿಸುತ್ತಿದ್ದರು. ಈಚೆಗೆ ಆತನಿಂದ ವಂಚನೆಗೊಳಗಾಗಿದ್ದರು ಎನ್ನಲಾಗುತ್ತಿದೆ.
ಕೆ.ಬಿ. ಈರಣ್ಣ ಮೂಲತಃ ಬೆಳಗಾವಿ ಜಿಲ್ಲೆಯವ. ದಾವಣಗೆರೆಯಲ್ಲಿ ಬೆಸ್ಕಾಂನಲ್ಲಿ ಬಿಲ್ ಕಲೆಕ್ಟರ್ ಆಗಿ ಮಾಡುತ್ತಿದ್ದು, ಬಂಬೂಬಜಾರ್‌ನಲ್ಲಿ ವಾಸವಾಗಿದ್ದನು. ಬಿಲ್ ಕಲೆಕ್ಟಿಂಗ್‌ಗೆಂದು ಹೋಗುತ್ತಿದ್ದ ಸಂದರ್ಭದಲ್ಲಿ ಆಶಾ ಮತ್ತು ಆತನ ನಡುವೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಆಶಾ ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ ಮಾಡಿದ್ದು, ಬ್ಯೂಟಿಪಾರ್ಲರ್ ಕೆಲಸ ಮಾಡುತ್ತಿದ್ದರು.
ಆಶಾಳಿಂದ ಈರಣ್ಣ 2 ಲಕ್ಷ ರೂಪಾಯಿ ಜೊತೆಗೆ ಚಿನ್ನಾಭರಣ ಪಡೆದುಕೊಂಡಿದ್ದನು. ಮದುವೆಯಾಗುವುದಾಗಿ ನಂಬಿಸಿದ್ದನು. ಈ ಮೊದಲೇ ಈರಣ್ಣನಿಗೆ ಮದುವೆಯಾಗಿರುವುದು ಈಚೆಗೆ ಗೊತ್ತಾಗಿದೆ. ತಾನು ಪ್ರೀತಿ ಮಾಡಿದವನೇ ಮೋಸ ಮಾಡಿದ್ದಾನೆ. ತಂದೆ-ತಾಯಿ ಹೇಳಿದರೂ ಕೇಳದೆ ಎಲ್ಲವನ್ನೂ ಕಳೆದುಕೊಂಡಿರುವ ನಾನು ಬದುಕಲು ಅರ್ಹತೆ ಇಲ್ಲ ಎಂದು ನಿರ್ಧರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
Laxmi News 24×7