Breaking News

ನುಡಿದಂತೆ ನಡೆದ ‘ರಾಕಿಂಗ್ ಸ್ಟಾರ್ ಯಶ್’ : ‘ಸಿನಿ ಕಾರ್ಮಿಕರ’ ಖಾತೆಗೆ ‘ಪರಿಹಾರದ ಹಣ’ ಜಮೆ ಮಾಡಿದ ರಾಕಿಭಾಯ್.!

Spread the love

ಬೆಂಗಳೂರು : ಕೊರೋನಾ ಸೋಂಕಿನ 2ನೇ ಅಲೆಯಿಂದಾಗಿ ಲಾಕ್ ಡೌನ್ ಜಾರಿಗೊಳಿಸಿದ ನಂತ್ರ, ಕನ್ನಡ ಸಿನಿ ರಂಗದ ಅನೇಕ ಕಲಾವಿಧರು, ತಂತ್ರಜ್ಞರು ಸಂಕಷ್ಟಕ್ಕೆ ಒಳಗಾಗಿದ್ದರು. ಇಂತಹ ಕಲಾವಿಧರಿಗೆ, ತಂತ್ರಜ್ಞರಿಗೆ ರಾಕಿಂಗ್ ಸ್ಟಾರ್ ಯಶ್ ನೆರವು ಘೋಷಿಸಿದ್ದರು. ಈ ನೆರವನ್ನು ತಾವು ಘೋಷಿಸಿದಂತೆ ಚಿತ್ರರಂಗದ ಕಾರ್ಮಿಕರಿಗೆ ತಲುಪಿಸುವ ಮೂಲಕ, ನುಡಿದಂತೆ ರಾಕಿಭಾಯ್ ನಡೆದುಕೊಂಡಿದ್ದಾರೆ.

 

ಹೌದು.. ಕನ್ನಡ ಚಿತ್ರರಂಗದ ಕಾರ್ಮಿಕರಿಗೆ ರಾಕಿಂಗ್ ಸ್ಟಾರ್ ಯಶ್ ತಲಾ 5 ಸಾವಿರ ರೂಪಾಯಿಯನ್ನು ಕೋವಿಡ್ ಪರಿಹಾರವಾಗಿ ಘೋಷಿಸಿದಂತೆ, ನೆರವು ತಲುಪಿಸಿ, ತಮ್ಮ ಮಾತು ಉಳಿಸಿಕೊಂಡಿದ್ದಾರೆ.

 

ಕೋವಿಡ್ ಕಾರಣದಿಂದಾಗಿ ಕೆಲಸವಿಲ್ಲದೇ ಮನೆಯಲ್ಲೇ ಕುಳಿತಂತ ಸಿನಿ ಕಾರ್ಮಿಕರಿಗೆ, ತಂತ್ರಜ್ಞರಿಗೆ, ಕಲಾವಿಧರಿಗೆ ತಲಾ 5 ಸಾವಿರ ರೂಪಾಯಿಯನ್ನು ಬಹುತೇಕರ ಖಾತೆಗಳಿಗೆ ನೇರವಾಗಿಯೇ ಜಮಾ ಮಾಡಿದ್ದಾರೆ.

ಈ ಕುರಿತಂತೆ ಮೀಸೆ ಪ್ರಕಾಶ್, ಮಂಜೇಗೌಡ, ಮೈಸೂರು ಶಿವಪ್ರಕಾಶ್ ಸೇರಿದಂತೆ ಅನೇಕ ಕಲಾವಿಧರು, ತಂತ್ರಜ್ಞರು, ತಮ್ಮ ಖಾತೆಗೆ ರಾಕಿಂಗ್ ಸ್ಟಾರ್ ಯಶ್ ಹಣ ಸಂದಾಯ ಮಾಡಿದ್ದಕ್ಕೆ, ಯಶ್ ಗೆ ಧನ್ಯವಾದ ತಿಳಿಸಿದ್ದಾರೆ. ಈ ಮೂಲಕ ತಮ್ಮ ಕೃತಜ್ಞತೆಯನ್ನು ವ್ಯಕ್ತ ಪಡಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ‌ ಇಲ್ಲ : ಆರ್ ವಿ ದೇಶಪಾಂಡೆ

Spread the loveಶಿರಸಿ (ಉತ್ತರ ಕನ್ನಡ): ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಆ ವಿಷಯಕ್ಕೆ ಪೂರ್ಣವಿರಾಮ ಇಡಲಾಗಿದ್ದು, ಮುಖ್ಯಮಂತ್ರಿ ಬದಲಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ