Breaking News

ಬುಲ್​ಬುಲ್’​ ಸಿನಿಮಾ ನಟಿ ಜತೆ ಅನುಷ್ಕಾ ಶರ್ಮಾ ಸಹೋದರನ ಡೇಟಿಂಗ್

Spread the love

ಸೆಲೆಬ್ರಿಟಿಗಳು ಮಾತ್ರವಲ್ಲ ಅವರ ಕುಟುಂಬದವರ ಮೇಲೂ ಅಭಿಮಾನಿಗಳು ಕಣ್ಣಿಟ್ಟಿರುತ್ತಾರೆ. ತಮ್ಮಿಷ್ಟದ ನಟ/ನಟಿಯ ಕುಟುಂಬದವರು ಏನು ಮಾಡುತ್ತಾರೆ? ಯಾರ ಜತೆ ಸುತ್ತಾಟ ನಡೆಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಈಗ ನಟಿ ಅನುಷ್ಕಾ ಶರ್ಮಾ ಅವರ ಸಹೋದರ ಕರ್ಣೇಶ್​ ಶರ್ಮಾ ಮೇಲೆ ಅಭಿಮಾನಿಗಳ ಕಣ್ಣುಬಿದ್ದಿದೆ. ಅಷ್ಟೇ ಅಲ್ಲ ಅವರ ಡೇಟಿಂಗ್​ ವಿಚಾರವನ್ನು ಅಭಿಮಾನಿಗಳು ಬಯಲಿಗೆಳೆದಿದ್ದಾರೆ.

ನೆಟ್​​ಫ್ಲಿಕ್ಸ್​ನಲ್ಲಿ ರಿಲೀಸ್​ ಆದ ಬುಲ್​ಬುಲ್​ ಸಿನಿಮಾ ನಟಿ ತೃಪ್ತಿ ದಿಮ್ರಿ ನಟಿಸಿದ್ದರು. ಈಗ ಅವರ ಜತೆ ಕರ್ಣೇಶ್​ ಸುತ್ತಾಟ ನಡೆಸುತ್ತಿದ್ದಾರೆ ಎನ್ನುವ ವಿಚಾರ ವೈರಲ್​ ಆಗಿದೆ. ಅಂದಹಾಗೆ, ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಕ್ಲೀನ್​ ಸ್ಲೇಟ್​ ಫಿಲ್ಮ್ಸ್​​​. ಈ ಪ್ರೊಡಕ್ಷನ್​ಹೌಸ್​ ಸ್ಥಾಪಕರು ಅನುಷ್ಕಾ ಶರ್ಮಾ ಹಾಗೂ ಕರ್ಣೇಶ್​. ಬುಲ್​ಬುಲ್​ ಸಿನಿಮಾದ ಶೂಟಿಂಗ್​ ವೇಳೆ ಕರ್ಣೇಶ್​ ಸೆಟ್​ಗೆ ತೆರಳುತ್ತಿದ್ದರು. ಆಗ, ತೃಪ್ತಿ ಮತ್ತು ಕರ್ಣೇಶ್​​ ನಡುವೆ ಗೆಳೆತನ ಬೆಳೆದಿದೆ.

ಈ ಸಿನಿಮಾ ತೆರೆಗೆ ಬಂದಿದ್ದು 2020ರಲ್ಲಿ. ಶೂಟಿಂಗ್​ ನಡೆದಿದ್ದು 2019ರಲ್ಲಿ. ಹೀಗಾಗಿ ಇವರ ನಡುವೆ ಇದ್ದ ಗೆಳೆತನ ಪ್ರೀತಿಗೆ ಬದಲಾಗಲು ಸ್ವಲ್ಪ ಸಮಯ ಹಿಡಿದಿದೆ ಎನ್ನಲಾಗುತ್ತಿದೆ. ಇಬ್ಬರೂ ಈಗ ಡೇಟಿಂಗ್​ ನಡೆಸುತ್ತಿದ್ದಾರೆ ಎನ್ನುವ ಮಾತು ಬಾಲಿವುಡ್​ ಅಂಗಳದಲ್ಲಿ ಜೋರಾಗಿದೆ. ಈ ಬಗ್ಗೆ ತೃಪ್ತಿಯಾಗಲೀ, ಕರ್ಣೇಶ್​ ಆಗಲಿ ಪ್ರತಿಕ್ರಿಯಿಸಿಲ್ಲ.

ಇತ್ತೀಚೆಗೆ ಅನುಷ್ಕಾ ತೃಪ್ತಿ ಮತ್ತು ಕರ್ಣೇಶ್​ ಜತೆ ಇರುವ ಫೋಟೋ ಪೋಸ್ಟ್​ ಮಾಡಿ ಮೇಜರ್​ ಮಿಸ್ಸಿಂಗ್​ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್​​ನಲ್ಲಿ ತೃಪ್ತಿಯನ್ನು ಕೂಡ ಸೇರಿಸಿಕೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ತೃಪ್ತಿ ಡೆಹ್ರಾಡೂನ್​ ಮೂಲದವರು. ಸದ್ಯ ಅವರು ಮುಂಬೈನಲ್ಲಿ ಸೆಟಲ್​​ ಆಗಿದ್ದಾರೆ.

ಅನುಷ್ಕಾ ಶರ್ಮಾ ಸಿನಿಮಾ ಬ್ಯಾನರ್​ ಅಡಿಯಲ್ಲಿ ಸಾಕಷ್ಟು ಚಿತ್ರಗಳು ಸಿದ್ಧಗೊಂಡಿವೆ. ಅವರ ನಿರ್ಮಾಣದ ಪಾತಾಳ್​ ಲೋಕ್​ ವೆಬ್​ ಸೀರಿಸ್​ ಜನಮನ್ನಣೆ ಪಡೆದುಕೊಂಡಿತ್ತು. ಅಲ್ಲದೆ, ಸಾಕಷ್ಟು ಅವಾರ್ಡ್​ಗಳನ್ನು ಕೂಡ ಪಡೆದುಕೊಂಡಿತ್ತು. ಇನ್ನು, ಬುಲ್​ಬುಲ್​ ಸಿನಿಮಾದ ಕಥೆ ಉತ್ತಮವಾಗಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು.


Spread the love

About Laxminews 24x7

Check Also

ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ

Spread the love ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಉದ್ಘಾಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ