Breaking News

ಆಸ್ಪತ್ರೆಯಲ್ಲಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಪ್ರೇಮಿಗಳು! ಇವರ ಕೃತ್ಯ ಕೇಳಿದ್ರೆ ಹಿಡಿಶಾಪ ಹಾಕೋದು ಗ್ಯಾರಂಟಿ

Spread the love

ಹುಬ್ಬಳ್ಳಿ: ಮಹಾಮಾರಿ ಕರೊನಾ ಮರಣಮೃದಂಗ ಬಾರಿಸುತ್ತಲೇ ಇದೆ. ಲೆಕ್ಕವಿಲ್ಲದಷ್ಟು ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆ ಬಳಿ ಬೆಡ್​, ಆಕ್ಸಿಜನ್​, ವೆಂಟಿಲೇಟರ್ ಬೆಡ್​​, ಔಷಧ, ರೆಮಿಡಿಸಿವರ್​ ಇಂಜಕ್ಷನ್​ ಸಿಗದೆ ಸಾಯುತ್ತಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲೂ ಇಲ್ಲೊಂದು ಜೋಡಿ ಅಮಾನವೀಯವಾಗಿ ವರ್ತಿಸಿ ಜೈಲು ಸೇರಿದ್ದಾರೆ.

ಹುಬ್ಬಳ್ಳಿಯ ವೆಂಕಟೇಶ್ವರ ಕಾಲನಿಯ ಸಿದ್ದನಗೌಡಾ ಪಾಟೀಲ್ ಮತ್ತು ವಿನಾಯಕನಗರದ ರಿಯಾ ಬಂಧಿತರು. ಸುಚಿರಾಯು ಆಸ್ಪತ್ರೆಯಲ್ಲಿ ಕ್ಲೀನರ್​ ಆಗಿ ಸಿದ್ದನಗೌಡ ಕೆಲಸ ಮಾಡುತ್ತಿದ್ದ. ಹುಬ್ಬಳ್ಳಿ ನಗರದ ತತ್ವದರ್ಶಿ ಆಸ್ಪತ್ರೆಯ ನರ್ಸ್ ರಿಯಾ. ಪ್ರೇಮಿಗಳಾದ ಇವರಿಬ್ಬರೂ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಬೇಕಿದ್ದ ರೆಮಿಡಿಸಿವರ್ ಇಂಜೆಕ್ಷನ್​ಗಳನ್ನು ಕದ್ದು ಅಕ್ರಮವಾಗಿ ಹೆಚ್ಚಿನ ದರಕ್ಕೆ ಮಾರಲು ಹೋಗಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಹುಬ್ಬಳ್ಳಿ: ಇಡಿ ಅಧಿಕಾರಿಗಳೆಂದು ಹೇಳಿಕೊಂಡು ಬಂಗಾರ, ಹಣ ದೋಚಿದ ಆರೋಪಿಗಳನ್ನ ಬಂಧಿಸಿದ ಸಿಸಿಬಿ ಪೊಲೀಸರು

Spread the loveಹುಬ್ಬಳ್ಳಿ: ಕಳೆದ ಒಂದು ವಾರದ ಹಿಂದೆ (ನವೆಂಬರ್ 19 ) ಇಡಿ ಅಧಿಕಾರಿಗಳೆಂದು ಹೇಳಿಕೊಂಡು, ಮೂರು ಕೋಟಿ ರೂಪಾಯಿಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ