ಗೋಕಾಕ: ಸುಮಾರು 5 ಗಂಟೆಗೂ ಹೆಚ್ಚು ಸಮಯ ಕೊರೋನಾ ಸೋಂಕಿತನ ಮೃತ ದೇಹವನ್ನು ಹೊರಗಿಟ್ಟು ಗೋಕಾಕ ಸರ್ಕಾರಿ ಆಸ್ಪತ್ರೆ ನಿರ್ಲಕ್ಷ ತೋರಿದ್ದಾರೆ.
ಗೋಕಾಕದಲ್ಲಿ ಇದು ಮತ್ತೊಂದು ಹೃದಯ ಕಳುಕುವ ಘಟನೆಯಾಗಿದ್ದು, ಎರಡು ದಿನಗಳ ಹಿಂದೆ ಗೋಕಾಕ ಸರಕಾರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿ ಮೂಡಲಗಿ ಪುರಸಭೆಯ ಸಿಬ್ಬಂದಿಯಾಗಿದ್ದು ಮೃತ ದೇಹವನ್ನು ಹೊರಗಡೆ ಇಟ್ಟಿದ್ದಾರೆ.
ಮೃತ ದೇಹವನ್ನು ಬೇಗನೆ ಅಂತ್ಯ ಸಂಸ್ಕಾರ ಮಾಡದೆ ಬೇಕಾಬಿಟ್ಟಿಯಾಗಿ ಮುಂಜಾನೆ 7 ಗಂಟೆಯಿಂದ ಹೊರಗಡೆ ಇಟ್ಟು ಇಲ್ಲಿನ ಸಿಬ್ಬಂದಿಗಳು ನಿರ್ಲಕ್ಷ ತೊರಿದ್ದಾರೆ .ಮಧ್ಯಾಹ್ನದ ವರೆಗೂ ಮೂರು
ಅಂಬುಲೇನ್ಸ ಇದ್ದರೂ ಸಹ ಮೃತ ದೇಹವನ್ನು ಅಂತ್ಯಕ್ರಿಯೆ ನಡೆಸದೆ ಇಟ್ಟಿದ್ದಾರೆ.

ಅದಲ್ಲದೆ ಗೋಕಾಕ ಕೋವಿಡ್ ಸೆಂಟರಗೆ ಸೋಂಕಿತರ ವ್ಯಕ್ತಿಯ ಸಂಬಂಧಿಕರು ಹೊರಗಿನಿಂದ ಬಂದು ಯಾವಾಗ ಬೇಕಾದಾಗ ಊಟ ನೀಡುತಿದ್ದಾರೆ, ಇತ್ತ ತಾಲೂಕಾ ಆರೋಗ್ಯ ಅಧಿಕಾರಿ ಜಗದೀಶ ಜಿಂಗಿಯವರು ಯಾರಿಗೂ ಹೊರಗಿನಿಂದ ಊಟ ನೀಡಬಾರದೆಂದು ಗೊತ್ತಿದ್ದರೂ ಸಹ ಇಲ್ಲಿನ ವೈದ್ಯರ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
Laxmi News 24×7