ಶಾಸಕರ ಅನುದಾನದಲ್ಲಿ ಯಲ್ಲಾಪುರ ಕ್ಕೆ ನಾಲ್ಕು ಆಂಬುಲೆನ್ಸ್‌ ನೀಡಿದ ಶಿವರಾಮ ಹೆಬ್ಬಾರ್‌

Spread the love

ಕಾರವಾರ: ಶಾಸಕರ ಅನುದಾನದಲ್ಲಿ ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ತಮ್ಮ ವಿಧಾನಸಭಾ ಕ್ಷೇತ್ರ ಯಲ್ಲಾಪುರಕ್ಕೆ ನಾಲ್ಕು ಅಂಬುಲೆನ್ಸ್ ಖರೀದಿಸಿದ್ದಾರೆ.
ಖರೀದಿಸಿದ ಅಂಬುಲೆನ್ಸ್ ಗಟ್ಟಿಮುಟ್ಟಾಗಿದೆಯೇ ಎಂದು ಪರೀಕ್ಷಿಸಲು ತಾವೇ ಸ್ವತ: ಹೊಸದಾಗಿ ಬಂದ ಅಂಬುಲೆನ್ಸ್ ಏರಿ ವಾಹನ ಚಲಾಯಿಸಿ ಟ್ರಯಲ್ ನೋಡಿದರು. ಯಲ್ಲಾಪುರದ ಪ್ರವಾಸಿ ಮಂದಿರದಿಂದ ಯಲ್ಲಾಪುರ ನಗರವನ್ನು ಒಂದು ಸುತ್ತುಹಾಕಿ ನಂತರ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಿದರು.

ಸಚಿವ ಶಿವರಾಮ್ ಹೆಬ್ಬಾರ್ ರವರು ತಮ್ಮ ವೃತ್ತಿಯನ್ನು ಮೊದಲು ಲಾರಿ ಚಾಲಕರಾಗಿ ಆರಂಭಿಸಿದ್ದರು. ನಂತರ ಬಿಜೆಪಿಯಲ್ಲಿ ಕಾರ್ಯಕರ್ತರಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕೆಲವು ರಾಜಕೀಯ ಕಾರಣಕ್ಕೆ ಕಾಂಗ್ರೆಸ್ ಗೆ ಬರುವ ಮೂಲಕ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಮತ್ತೆ ಪುನ: ಬಿಜೆಪಿಗೆ ಬರುವ ಮೂಲಕ ಇಂದು ರಾಜ್ಯ ಕಾರ್ಮಿಕ ಸಚಿವರಾಗಿದ್ದಾರೆ.


Spread the love

About Laxminews 24x7

Check Also

ವಾಟಾಳ್ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಕ್ರಮ: ಶಿವರಾಜ್ ತಂಗಡಗಿ

Spread the loveಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸ ಸರ್ಕಾರ ಮಾಡಲಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ