ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ಮದುವೆ ಆಗಿದ್ದ 5 ಮಕ್ಕಳ ತಾಯಿ ಪ್ರಿಯಕರನ ಜೊತೆಗೂಡಿ ಎರಡನೇ ಗಂಡನನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ನೋಯ್ಡಾದ ಬದನ್ಯುವಿನ ನಿವಾಸಿ ಸುಶೀಲಾ ತನ್ನ ಮೊದಲನೇ ಗಂಡ ಲಾಲಾರಾಮ್ನನ್ನು 5 ಮಕ್ಕಳೊಂದಿಗೆ ತೊರೆದು ಸಂತ್ರಾಮ್ ಎಂಬಾತನನ್ನು ಎರಡನೇ ಮದುವೆ ಆಗಿ ನಯಾ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಸಂತ್ರಾಮ್ ಜೊತೆ10ರಿಂದ 20 ವರ್ಷ ಸಂಬಂಧ ಹೊಂದಿದ್ದ ಸುಶೀಲಾ, ಅದೇ ಗ್ರಾಮದ ಬದನ್ಯುವಿನ ನಿವಾಸಿ ಮನೋಜ್ ಜೊತೆ ಹೊಸದಾಗಿ ಅನೈತಿಕ ಸಂಬಂಧ ಬೆಳೆಸಿದ್ದಾಳೆ.
ಮೇ 6ರಂದು ಮನೋಜ್ ಜೊತೆ ಸೇರಿ ಸುಶೀಲಾ ತನ್ನ ಎರಡನೇ ಗಂಡ ಸಂತ್ರಾಮ್ನನ್ನು ಕೊಲೆ ಮಾಡಿದ್ದಾಳೆ. ಬಳಿಕ ಏನೂ ತಿಳಿಯದಂತೆ ನಾಟಕವಾಡಿದ್ದಾಳೆ. ಮೇ 7ರಂದು ಸಂತ್ರಾಮ್ ನನ್ನು ಕೊಲೆ ಮಾಡಲಾಗಿದೆ ಎಂದು ಸಹೋದರ ಲಾಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದರು.
ಗುರುವಾರ ತನಿಖೆ ವೇಳೆ ಪೊಲೀಸರು ಆರೋಪಿ ಪತ್ನಿ ಸುಶೀಲಾ ಮತ್ತು ಆಕೆಯ ಪ್ರಿಯಕರ ಮನೋಜ್ ಸೇರಿ ನಾಲ್ವರನ್ನು ವಿಚಾರಣೆಗೊಳಪಡಿಸಿದರು. ಈ ವೇಳೆ ಸುಶೀಲಾ ತನ್ನ ಎರಡನೇ ಗಂಡನನ್ನು ಮನೋಜ್ ಜೊತೆ ಸೇರಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
ಘಟನೆ ಸಂಬಂಧ ನಾಲ್ವರನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಡಿಸಿಪಿ ಅಂಕುರ್ ಅಗ್ರವಾಲ್ ಹೇಳಿದ್ದಾರೆ.
Laxmi News 24×7