ಗದಗ: ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರ ನಾಗನೂರ ಗ್ರಾಮದ ತಾಯಿ ಕಸ್ತೂರಿ ಅವರು ಅಡವಿಟ್ಟಿರುವ ಮಾಂಗಲ್ಯವನ್ನು ವಾಪಸ್ ಕೊಡಿದುವುದಾಗಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ.
ಕಸ್ತೂರಿ ಅವರು ಮಾಂಗಲ್ಯವನ್ನು ಅಡವಿಟ್ಟು ಟಿವಿ ಖರೀದಿ ಮಾಡಿ ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟ ಸುದ್ದಿಯನ್ನುಮಾಡಿತ್ತು. ಈ ವರದಿಯನ್ನು ಗಮನಿಸಿಮಾತನಾಡಿದ ಸಚಿವ ಸಿಸಿ ಪಾಟೀಲ್, ಘಟನೆ ಬಗ್ಗೆ ನಾನು ಮಾಹಿತಿ ಪಡೆದು ಮಹಿಳೆಯೊಂದಿಗೆ ಮಾತನಾಡಿದ್ದೇನೆ. ಅಲ್ಲದೇ 2 ದಿನಗಳಲ್ಲಿ ಮಾಂಗಲ್ಯವನ್ನು ಕೊಡಿಸುವುದಾಗಿ ಹೇಳಿದ್ದೇನೆ. ಅಲ್ಲದೇ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದಾಗಿ ತಿಳಿಸಿದರು.
ಏನಿದು ಘಟನೆ: ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರ ನಾಗನೂರ ಗ್ರಾಮದ ತಾಯಿ ಕಸ್ತೂರಿ ಅವರು ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ತಮ್ಮ ಮಾಂಗಲ್ಯವನ್ನು ಅಡವಿಟ್ಟು ಮನೆಗೆ ಟಿವಿ ಖರೀದಿಸಿದ್ದರು. ಕೊರೊನಾ ಕಂಠಕದಿಂದ ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಆದರೆ ಮನೆಯಲ್ಲಿ ಟಿವಿ ಇಲ್ಲದ ಕಾರಣ ಕಾರ್ಯಕ್ರಮ ನೋಡಲು ಮಕ್ಕಳು ಸಮಸ್ಯೆ ಎದುರಿಸಿದ್ದರು.
ಈ ಕುರಿತುಮಾತನಾಡಿದ್ದ ಕಸ್ತೂರಿ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಬಯಸಿದ್ದೆ. ಆದರೆ ಟಿವಿಯಲ್ಲಿ ಪಾಠ ಬರುತ್ತಿದ್ದ ಕಾರಣ ಮಕ್ಕಳು ಬೇರೆ ಮನೆಗೆ ಹೋಗಿ ಟಿವಿ ನೋಡುತ್ತಿದ್ದರು. ಆದರೆ ಅವರು ಬೇರೆ ಬೇರೆ ಕಾರ್ಯಕ್ರಮಗಳನ್ನು ನೋಡುತ್ತಿದ್ದರು. ಹೀಗಾಗಿ ಮಕ್ಕಳು ಶಿಕ್ಷಣ ವಂಚಿತರಾಗಬಾರದೆಂದು ಟಿವಿ ಖರೀದಿ ಮಾಡುವ ನಿರ್ಧಾರ ಮಾಡಿದೆ. ಆದರೆ ಗ್ರಾಮದಲ್ಲಿ ಯಾರ ಬಳಿಯೂ ಸಾಲ ಲಭಿಸಿರಲಿಲ್ಲ. ಆದ್ದರಿಂದ ನನ್ನ ಬಳಿ ಇದ್ದ ಮಾಂಗಲ್ಯವನ್ನು ಅಡವಿಟ್ಟು ಟಿವಿ ತಂದಿದ್ದೇನೆ ಎಂದು ತಿಳಿಸಿದ್ದರು.