ಶಿವಮೊಗ್ಗ: ಮದುವೆ ಆದ ಮೇಲೆ ಹೆಂಡತಿಯನ್ನ ಚೆನ್ನಾಗಿ ಓದಿಸಿದ್ದ. ಕೆಎಎಸ್ ಅಧಿಕಾರಿ ಸ್ಥಾನಕ್ಕೇರಲೂ ಬೆನ್ನೆಲುಬಾಗಿ ನಿಂತಿದ್ದ. ತಾನು ಕಂಡಿದ್ದ ಕನಸು ನನಸಾದ ಖುಷಿಯಲ್ಲಿ ಬದುಕಿನ ಪಯಣ ನಡೆಸಬೇಕಿದ್ದವ ಮಹಾಮಾರಿ ಕರೊನಾಗೆ ಬಲಿಯಾಗಿದ್ದಾನೆ.
ಶಿವಮೊಗ್ಗದ ಸವಾರ್ ಲೈನ್ ರಸ್ತೆಯ ಸೀನಾ ಅಲಿಯಾಸ್ ಕಡ್ಡಿ ಸೀನಾ ಮೃತ ದುರ್ದೈವಿ. ಈತ ತನ್ನ ಅಕ್ಕನ ಮಗಳು ಅಶ್ವಿನಿಯನ್ನು ಮದುವೆಯಾಗಿದ್ದ. ನಾನಂತೂ ಓದಿಲ್ಲ ಹಾಗಾಗಿ ಹೆಂಡತಿಯಾದರೂ ಓದಿ ಕೆಎಎಸ್ ಅಧಿಕಾರಿ ಆಗಲಿ ಎಂದು ಕನಸುಕಂಡಿದ್ದ. ಹೀಗಾಗಿ ಹೆಂಡತಿಗೆ ಕೆಎಎಸ್ ಪೂರ್ವಬಾವಿ ತರಬೇತಿ ಕೊಡಿಸಿದ್ದ. ಕಳೆದ ವರ್ಷ ಅಶ್ವಿನಿ ಕೆಎಎಸ್ ಪಾಸ್ ಮಾಡಿ ಆರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ತಹಸೀಲ್ದಾರ್ ಹುದ್ದೆಗೇರಿದರು. ಆದರೆ ಇದೀಗ ಸೀನಾ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾನೆ.
Laxmi News 24×7