Breaking News

ಬಿಜೆಪಿಯು ಲಸಿಕೆಗಳನ್ನು ರಫ್ತು ಮಾಡಿದೆ. ಲಸಿಕೆಗಳು ನಮ್ಮಲ್ಲೆ ಇದ್ದಿದ್ದರೆ ಅದೆಷ್ಟೋ ಜನರ ಜೀವಗಳನ್ನು ಉಳಿಸಬಹುದಿತ್ತು: ಹೆಬ್ಬಾಳ್ಕರ್

Spread the love

ಭಾರತವನ್ನು ಇತರ ದೇಶಗಳ ಎದುರು ಮಾದರಿಯಾಗಿಸುವ ಬದಲು, ಬಿಜೆಪಿಯು ಲಸಿಕೆಗಳನ್ನು ರಫ್ತು ಮಾಡಿದೆ. ಲಸಿಕೆಗಳು ನಮ್ಮಲ್ಲೆ ಇದ್ದಿದ್ದರೆ ಅದೆಷ್ಟೋ ಜನರ ಜೀವಗಳನ್ನು ಉಳಿಸಬಹುದಿತ್ತು. ಕಾಂಗ್ರೆಸ್ ತನ್ನ 100 ಕೋಟಿ ಯೋಜನೆಯೊಂದಿಗೆ ಲಸಿಕೆ ನೀಡಲು ಸಿದ್ಧವಿದ್ದು, ಬಿಜೆಪಿ ಇದಕ್ಕೆ ಅನುಮತಿ ನೀಡಬೇಕು ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಆಗ್ರಹಿಸಿದ್ದಾರೆ.

ಸರಣಿ ಟ್ವೀಟ್ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಲಕ್ಷ್ಮೀ ಹೆಬ್ಬಾಳ್ಕರ್ ವಿರೋಧ ಪಕ್ಷದಲ್ಲಿದ್ದರೂ ಕಾಂಗ್ರೆಸ್ ತನ್ನ ಜವಾಬ್ದಾರಿಯನ್ನು ಆಡಳಿತ ಪಕ್ಷಕ್ಕಿಂತಲೂ ಬಹಳ ಚೆನ್ನಾಗಿಯೇ ನಿಭಾಯಿಸುತ್ತಿದೆ. ನಮ್ಮ ದೇಶವು ಊಹಿಸಲಸಾಧ್ಯವಾದ ಕೊರೋನಾ ಸಂಕಷ್ಟದಿಂದ ಬಳಲುತ್ತಿದೆ. ಕರ್ನಾಟಕ ಕಾಂಗ್ರೆಸ್‍ನ 100 ಕೋಟಿ ರೂ.ಯೋಜನೆಯು ಭರವಸೆ ಮೂಡಿಸಿದೆ. ಬಿಜೆಪಿ ಸರ್ಕಾರವು ಕಾಂಗ್ರೆಸ್‍ಗೆ ಲಸಿಕೆ ಖರೀದಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.


Spread the love

About Laxminews 24x7

Check Also

ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ

Spread the loveಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ