Breaking News

ಗೌತಮ್‌ ಗಂಭೀರ್‌ ಔಷಧವನ್ನು ದಾಸ್ತಾನು ಮಾಡಿದ್ದು ಹೇಗೆ?: HC

Spread the love

ನವದೆಹಲಿ, ಮೇ 25: ಮಾಜಿ ಕ್ರಿಕೆಟರ್, ಬಿಜೆಪಿ ಸಂಸದ ಗೌತಮ್‌ ಗಂಭೀರ್‌ ಅವರು ಫ್ಯಾಬಿಫ್ಲೂ ಔಷಧವನ್ನು ಅಕ್ರಮವಾಗಿ ದಾಸ್ತಾನು ಮತ್ತು ಹಂಚಿಕೆ ಮಾಡಿರುವ ಬಗ್ಗೆ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ದೆಹಲಿಯ ಔಷಧ ನಿಯಂತ್ರಕಕ್ಕೆ ದೆಹಲಿ ಹೈಕೋರ್ಟ್‌ನಿರ್ದೇಶನ ನೀಡಿದೆ.

ಕೋವಿಡ್‌ ಔಷಧಗಳ ಅಕ್ರಮ ದಾಸ್ತಾನಿಗೆ ಸಂಬಂಧಿಸಿದಂತೆ ಗಂಭೀರ್‌ ಹಾಗೂ ಎಎಪಿಯ ಇಬ್ಬರು ಶಾಸಕರ ವಿರುದ್ಧ ಎರಡು ಪ್ರತ್ಯೇಕ ಮೊಕದ್ದಮೆಗಳ ವಿಚಾರಣೆ ದೆಹಲಿ ನ್ಯಾಯಾಲಯದಲ್ಲಿ ನಡೆದಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 31ಕ್ಕೆ ನಿಗದಿಪಡಿಸಲಾಗಿದೆ.

ಗಂಭೀರ್‌ ಅವರು ಔಷಧ ವಿತರಿಸುತ್ತಿದ್ದ ಸಮಯದಲ್ಲಿ ಫ್ಯಾಬಿ ಫ್ಲೂ ಔಷಧ ಕೊರತೆ ಉಂಟಾಗಿತ್ತು ಎಂಬುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ಜಸ್ಮೀತ್ ಸಿಂಗ್ ಅವರಿದ್ದ ವಿಭಾಗೀಯ ಪೀಠ “ಗೌತಮ್ ಗಂಭೀರ್ ದೇಶದ ಪರ ಆಡಿದ ಆಟಗಾರ, ಅವರಿಗೆ ಒಳ್ಳೆಯ ಉದ್ದೇಶ ಇದೆ ಎಂಬುದು ನಮಗೆ ಗೊತ್ತು… ಆದರೆ, ಅವರು ಮಾಡಿದ್ದು ಜವಾಬ್ದಾರಿಯುತ ಕಾರ್ಯವಲ್ಲ, ಆದರೆ, ಇದು ಉದ್ದೇಶಪೂರ್ವಕ ಅಲ್ಲದಿರಬಹುದು, ಈ ಬಗ್ಗೆ ಹೆಚ್ಚಿನ ತನಿಖೆ, ಪರಿಶೀಲನೆ ಅಗತ್ಯ ” ಎಂದಿತು.

ಬಿಜೆಪಿ ಸಂಸದ ಗೌತಮ್ ಗಂಭೀರ್ ಮತ್ತಿತರರನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್ ಗಂಭೀರ್‌ ಪ್ರಕರಣದಲ್ಲಿ ವಿತರಣೆಗೆಂದು ತೆಗೆದುಕೊಂಡಿದ್ದ ಗಂಭೀರ್ ಕಚೇರಿಯಲ್ಲಿದ್ದ 2,628 ಫ್ಯಾಬಿಫ್ಲೂ ಮಾತ್ರೆಗಳ ಸ್ಟ್ರಿಪ್‌ಗಳಲ್ಲಿ 285 ಸ್ಟ್ರಿಪ್‌ಗಳು ಉಳಿದಿದ್ದು ಅವುಗಳನ್ನು ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯಕ್ಕೆ ಒಪ್ಪಿಸಲಾಗಿದೆ. ಗೌತಮ್‌ ಗಂಭೀರ್‌ ಪ್ರತಿಷ್ಠಾನದ ಮೂಲಕ ಮಾತ್ರೆ ಖರೀದಿಗೆ ಹಣ ನೀಡಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾತ್ರೆಗಳನ್ನು ನೀಡಿದ್ದಾದರೂ ಹೇಗೆ? ಒಂದೇ ಪ್ರಿಸ್ಕ್ರಿಪ್ಷನ್‌ (ಔಷಧ ಚೀಟಿ) ಆಧರಿಸಿ ಇಷ್ಟು ಖರೀದಿಯಾಗಿದೆಯೇ? ಈ ಬಗ್ಗೆ ತನಿಖೆ ನಡೆಸಿ ವರದಿಯಲ್ಲಿ ಉಲ್ಲಂಘನೆಗಳನ್ನು ಮತ್ತು ಅದಕ್ಕೆ ಹೊಣೆಗಾರರಾದ ವ್ಯಕ್ತಿಗಳನ್ನು ಹೆಸರಿಸಬೇಕು. ಯಾರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಬೇಕು ನ್ಯಾಯಾಲಯ ತಿಳಿಸಿದೆ.

ಎಎಪಿ ಶಾಸಕರಾದ ಪ್ರೀತಿ ತೋಮರ್ ಮತ್ತು ಪ್ರವೀಣ್ ಕುಮಾರ್ ಆಮ್ಲಜನಕ ಸಿಲಿಂಡರ್ ಖರೀದಿಸಿದ್ದನ್ನು ತನಿಖೆ ನಡೆಸುವಂತೆ ಔಷಧ ನಿಯಂತ್ರಕಕ್ಕೆ ಇದೇ ವೇಳೆ ಹೈಕೋರ್ಟ್ ಸೂಚಿಸಿದೆ. ಆದರೆ, ಗಂಭೀರ್ ಮತ್ತು ಇಬ್ಬರು ಶಾಸಕರ ವಿರುದ್ಧ “ಯಾವುದೇ ಕ್ರಮ ತೆಗೆದುಕೊಳ್ಳಬಹುದು” ಎಂದು ಹೈಕೋರ್ಟ್ ಸ್ಪಷ್ಟಪಡಿಸಿಲ್ಲ.


Spread the love

About Laxminews 24x7

Check Also

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ

Spread the love ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ