Breaking News

ಕೋವಿಡ್ 19: ಖಾಸಗಿ ಆಯಂಬುಲೆನ್ಸ್‌ಗಳು ಇನ್ನು ಬೇಕಾಬಿಟ್ಟಿ ಬಾಡಿಗೆ ಹೇಳುವಂತಿಲ್ಲ!

Spread the love

ಬೆಂಗಳೂರು, ಮೇ 22: ಕೊರೊನಾ ವೈರಸ್‌ನ ಎರಡನೇ ಅಲೆಯಲ್ಲಿ ನಲುಗಿರುವ ಸಂದರ್ಭದಲ್ಲಿ ಕೆಲ ಖಾಸಗೀ ಆಯಂಬುಲೆನ್ಸ್‌ಗಳು ಅಕ್ಷರಶಃ ಸುಲಿಗೆಗೆ ಇಳಿದಿವೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಖಾಸಗೀ ಆಯಂಬುಲೆನ್ಸ್‌ಗಳಿಗೆ ರಾಜ್ಯಸರ್ಕಾರ ದರವನ್ನು ನಿಗದಿಪಡಿಸಿ ಆದೇಶವನ್ನು ಹೊರಡಿಸಿದೆ.

ಎರಡು ವಿಭಾಗದಲ್ಲಿ ಆಯಂಬುಲೆನ್ಸ್‌ಗಳಿಗೆ ದರವನ್ನು ನಿಗದಿ ಪಡಿಸಲಾಗಿದೆ. ಸಾಮಾನ್ಯ ಆಯಂಬುಲೆನ್ಸ್‌ಗಳಿಗೆ (ಪೇಶೆಂಟ್ ಟ್ರಾನ್ಸ್‌ಪೋರ್ಟ್ ಆಯಂಬುಲೆನ್ಸ್)ಮೊದಲ 10 ಕಿ.ಮೀಟರ್‌ಗಳಿಗೆ 1500 ರೂಪಾಯಿ ಗರಿಷ್ಟದರವನ್ನು ನಿಗದಿಗೊಳಿಸಲಾಗಿದೆ. 10 ನಂತರದ ಪ್ರಯಾಣಕ್ಕೆ ಪ್ರತಿ ಕಿ.ಮೀಗೆ 120 ರೂಪಾಯಿ ನಿಗದಿಗೊಳಿಸಲಾಗಿದೆ. ಇದು ಆಮ್ಲಜನಕ, ಪಿಪಿಇ ಕಿಟ್, ಗ್ಲೌಸ್, ಮಾಸ್ಕ್, ಶೀಲ್ಡ್, ಸ್ಯಾನಿಟೈಸರ್, ಡ್ರೈವರ್ ಈ ಎಲ್ಲವನ್ನೂ ಒಳಗೊಂಡಿರುತ್ತದೆ. ಗಂಟೆಗೆ 200 ರೂಪಾಯಿ ವೈಟಿಂಗ್ ಚಾರ್ಜ್ ಎಂದು ನಿಗದಿಗೊಳಿಸಲಾಗಿದೆ.


Spread the love

About Laxminews 24x7

Check Also

ಮತ್ತೆ ಪಾಚಿಕಟ್ಟಿದ ಸುವರ್ಣ ಸೌಧ:

Spread the loveಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಬೆಳಗಾವಿಯ ಸುವರ್ಣ ವಿಧಾನಸೌಧ ಮತ್ತೆ ಪಾಚಿಕಟ್ಟಿದೆ. ಸ್ವಚ್ಛತೆಗೆ ಅನುದಾನ ಕೊರತೆ ಎದುರಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ