Breaking News

ಅಬ್ಬಬ್ಬಾ..! 707 ಹುದ್ದೆಗಳಿಗೆ 4.71 ಲಕ್ಷ ಅರ್ಜಿ

Spread the love

ನೂರೈವತ್ತು ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಪುಟ್ಟದೊಂದು ಕೆಲಸ ಸಿಕ್ಕರೆ ಸಾಕು ಎಂದು ಹಾತೊರೆಯುವ ಕೋಟ್ಯಂತರ ಜೀವಗಳನ್ನು ನೋಡುತ್ತಲೇ ಇರುತ್ತೇವೆ.

ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಂಪರ್ಕ ಪೋರ್ಟಲ್‌ನಲ್ಲಿ ಈ ವಾಸ್ತವದ ಕರಾಳ ರೂಪ ಕಣ್ಣಿಗೆ ರಾಚುವಂತೆ ಕಂಡಿದೆ. ಮೇ 21ರಂದು ಕಂಡಂತೆ 707 ಹುದ್ದೆಗಳಿಗೆ 4,71,922 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಎಂಎಸ್‌ಎಂಇ ಸಂಪರ್ಕ ಪೋರ್ಟಲ್‌ಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರು ಜೂನ್ 2018ರಲ್ಲಿ ಚಾಲನೆ ಕೊಟ್ಟಿದ್ದರು.

ಉದ್ಯೋಗಾವಕಾಶಗಳು ಇದ್ದಲ್ಲಿ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳಿಗೆ ಈ ಪೋರ್ಟಲ್ ವೇದಿಕೆಯಾಗಿದೆ. ಮತ್ತೊಂದೆಡೆ ಕೆಲಸಕ್ಕೆ ಅಭ್ಯರ್ಥಿಗಳನ್ನು ತೆಗೆದುಕೊಳ್ಳುವವರಿಗೂ ಸಹ ಸೂಕ್ತ ಮಂದಿಯನ್ನು ಪತ್ತೆ ಮಾಡಲು ಈ ಪೋರ್ಟಲ್ ಅವಕಾಶ ಮಾಡಿಕೊಡುತ್ತದೆ. ಎಂಎಸ್‌ಎಂಇನ 18 ತಾಂತ್ರಿಕ ಕೇಂದ್ರಗಳಿಂದ ವಿದ್ಯಾರ್ಥಿಗಳು ಹಾಗೂ ತರಬೇತಿಗೊಂಡವರನ್ನು ನೇಮಕ ಮಾಡಿಕೊಳ್ಳಲು ಎಂಎಸ್‌ಎಂಇ ಸಂಪರ್ಕ ಡಿಜಿಟಲ್ ವೇದಿಕೆಯಾಗಿದೆ.

ಈ ತಾಂತ್ರಿಕ ಕೇಂದ್ರಗಳು ವಾರ್ಷಿಕ 1.5 ಲಕ್ಷ ಮಂದಿಗೆ ತರಬೇತಿ ಕೊಡಲಿದ್ದು, ಇವರಲ್ಲಿ ಬಹುತೇಕ ಮಂದಿಯನ್ನು ದೇಶದೊಳಗಿನ ಹಾಗೂ ಹೊರಗಿನ ಸಂಸ್ಥೆಗಳು ಕೆಲಸಕ್ಕೆ ತೆಗೆದುಕೊಳ್ಳಲಿವೆ.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ