Breaking News

ಕೊವಿಡ್ ಪರೀಕ್ಷೆಯನ್ನು ಮನೆಯಲ್ಲಿ ನಾವೇ ಮಾಡಿಕೊಳ್ಳಬಹುದು; ಐಸಿಎಂಆರ್​ನಿಂದ ಬಿಡುಗಡೆಯಾಯ್ತು ಹೊಸ ಕಿಟ್

Spread the love

ದೆಹಲಿ: ಕೊವಿಡ್-19 ಪರೀಕ್ಷೆಯನ್ನು ನಮಗೆ ನಾವೇ ಮಾಡಿಕೊಳ್ಳಬಹುದು. ಯಾವುದೇ ವೈದ್ಯಕೀಯ ಸಿಬ್ಬಂದಿಯ ಇರುವಿಕೆಯ ಹೊರತಾಗಿ, ಕೊರೊನಾ ಪರೀಕ್ಷೆಯನ್ನು ನಾವೇ ಮಾಡಿಕೊಳ್ಳಬಹುದು. ಈ ನೂತನ ವ್ಯವಸ್ಥೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಇಂದು (ಮೇ 19) ಸೂಚನೆ ನೀಡಿದೆ. ನಮಗೆ ನಾವೇ ಕೊರೊನಾ ಪರೀಕ್ಷೆ ನಡೆಸುವುದು ಹೇಗೆ ಎಂಬ ಬಗ್ಗೆ ಸೂಚನೆ ನೀಡಿದ ಐಸಿಎಂಆರ್ ಕೊವಿಸೆಲ್ಫ್ ಎಂಬ ಕಿಟ್​ನ ಬಗ್ಗೆ ವಿವರಣೆ ನೀಡಿದೆ.

ಸ್ವತಃ ನಮಗೆ ನಾವೇ ಕೊವಿಡ್-19 ಪರೀಕ್ಷೆ ಮಾಡಿಕೊಳ್ಳಬಹುದಾದ ಕೊವಿಸೆಲ್ಫ್ ಎಂಬ ಕಿಟ್ ಒಂದನ್ನು ಐಸಿಎಂಆರ್ ಅನುಮೋದಿಸಿದೆ. ಈ ವಿಧಾನದ ಪರೀಕ್ಷೆಗೆ ಕೇವಲ ಮೂಗಿನ ದ್ರವ ಮಾತ್ರ ಅಗತ್ಯವಾಗಿದೆ. ಈ ವಿಧಾನದ ಮೂಲಕ ರ್ಯಾಪಿಡ್ ಆಂಟಿಜೆನ್ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ.

ಕೊವಿಸೆಲ್ಫ್ ವಿಧಾನದ ಮೂಲಕ 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ತಮಗೆ ತಾವೇ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. 2 ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಹಿರಿಯರ ಸಹಾಯದಿಂದ ಈ ಪರೀಕ್ಷೆಯನ್ನು ಮನೆಯಲ್ಲೇ ಮಾಡಿಕೊಳ್ಳಬಹುದಾಗಿದೆ.

ಈ ಕಿಟ್ ಲಭ್ಯವಿದೆ ಎಂದು ಎಲ್ಲರೂ ಬೇಕಾಬಿಟ್ಟಿ ಈ ವಿಧಾನ ಬಳಸುವಂತಿಲ್ಲ. ಬದಲಾಗಿ, ಯಾರಲ್ಲಿ ಕೊರೊನಾ ಲಕ್ಷಣ ಇದೆ ಮತ್ತು ಯಾರು ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆಯೋ ಅಂಥವರು ಈ ವಿಧಾನದ ಮೂಲಕ ಕೊರೊನಾ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ.

ಕೊವಿಸೆಲ್ಫ್ ಕಿಟ್​ನ್ನು ಬಳಸುವುದು ಹೇಗೆ?
ಕೊವಿಸೆಲ್ಫ್ ಕಿಟ್​ನೊಂದಿಗೆ ಅದರ ಮೂಲಕ ಕೊರೊನಾ ಪರೀಕ್ಷೆ ನಡೆಸುವ ವಿಧಾನದ ವಿವರಣೆ ಇರುವ ಮ್ಯಾನುವಲ್ ಕೂಡ ಲಭ್ಯವಿರಲಿದೆ. ಹೆಚ್ಚುವರಿಯಾಗಿ ಐಸಿಎಮ್​ಆರ್, ಪರೀಕ್ಷೆ ನಡೆಸಬೇಕಾದ ವಿಧಾನದ ಹಂತವನ್ನು ವಿಡಿಯೋ ಮೂಲಕವೂ ವಿವರಿಸಿದೆ.

ಈ ಕಿಟ್​ನಲ್ಲಿ ಮೂಗಿನ ದ್ರವ ಸಂಗ್ರಹಿಸುವ ಉಪಕರಣ, ಎಕ್ಸ್​ಟ್ರಾಕ್ಷನ್ ಟ್ಯೂಬ್ ಮತ್ತು ಒಂದು ಟೆಸ್ಟ್ ಕಾರ್ಡ್ ಹೊಂದಿರುವ ಪೌಚ್ ಇರಲಿದೆ.

ಕೊವಿಸೆಲ್ಫ್ ಮೂಲಕ ಪರೀಕ್ಷೆ ನಡೆಸಲು, ಬಳಕೆದಾರರು ಮೈಲ್ಯಾಬ್ (mylab) ಅಪ್ಲಿಕೇಷನ್​ನ್ನು ತಮ್ಮ ಮೊಬೈಲ್​ನಲ್ಲಿ ಹೊಂದಿರಬೇಕಿದೆ. ಮೂಗಿನ ದ್ರವ ಪಡೆದು ಟ್ಯೂಬ್​ಗೆ ಅದನ್ನು ಹಾಕಬೇಕು. ಟ್ಯೂಬ್​ನಲ್ಲಿ ಮೂಗಿನ ದ್ರವ ಇಳಿದುಕೊಳ್ಳುವಂತೆ ನೋಡಿಕೊಳ್ಳಬೇಕು.


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ