ರಾಯಚೂರು: ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಏಕಾಏಕಿ ಆಕ್ಸಿಜನ್ ಕೊರತೆ ಎದುರಾದ ಘಟನೆ ನಡೆದಿದ್ದು ಸಕಾಲಕ್ಕೆ ಕಾಂಗ್ರೆಸ್ ಯುವ ನಾಯಕ ಬಸನಗೌಡ ಬಾದರ್ಲಿ ಆಕ್ಸಿಜನ್ ಪೂರೈಸುವ ಮೂಲಕ 50 ಜನರ ಪ್ರಾಣ ಉಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗುತ್ತಿದ್ದಂತೆಯೇ ಸ್ವತಃ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಬಸನಗೌಡ ಬಾದರ್ಲಿ ಅವರಿಗೆ ಕರೆ ಮಾಡಿ ಆಕ್ಸಿಜನ್ ಒದಗಿಸುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಕೆಲವೇ ಹೊತ್ತಿನಲ್ಲಿ ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ 15 ಜಂಬೋ ಸಿಲಿಂಡರ್ಗಳನ್ನ ಆಸ್ಪತ್ರೆಗೆ ಪೂರೈಕೆ ಮಾಡಲಾಗಿದ್ದು 50 ಮಂದಿ ರೋಗಿಗಳು ಅಪಾಯದಿಂದ ಪಾರಾಗಿದ್ದಾರೆ.

ಅಲ್ಲದೇ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಉಚಿತ ಆಕ್ಸಿಜನ್ ನೀಡಿ ಬಸನಗೌಡ ಬಾದರ್ಲಿ ಪ್ರಾಣ ಉಳಿಸುತ್ತಿದ್ದಾರೆ, ಫೌಂಡೇಶನ್ ವತಿಯಿಂದ ಬಡವರಿಗೆ ಸಹಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.
Laxmi News 24×7