Breaking News

ಜನಾಕ್ರೋಶಕ್ಕೆ ಮಣಿದ ಆರೋಗ್ಯ ಇಲಾಖೆ: ಡಾ. ರಾಜು ಕೃಷ್ಣಮೂರ್ತಿಯವರ ಕ್ಲಿನಿಕ್​ ಪುನಾರಂಭ

Spread the love

ಮಾಸ್ಕ್​ ಇಲ್ಲದೇ ಕೊರೊನಾ ಟ್ರೀಟ್​ಮೆಂಟ್​ ಕೊಡುತ್ತಾರೆಂಬ ಕಾರಣಕ್ಕೆ ಬಂದ್‌ ಆಗಿದ್ದ ಡಾ. ರಾಜು ಕೃಷ್ಣಮೂರ್ತಿಯವರ ಕ್ಲಿನಿಕ್​ ಇಂದಿನಿಂದ ಸಾರ್ವಜನಿಕ ಸೇವೆಗೆ ಮುಕ್ತವಾಗಿದೆ.

ಡಾ. ರಾಜು ಕೃಷ್ಣಮೂರ್ತಿ ಬೆಂಗಳೂರಿನ ಮೂಡಲಪಾಳ್ಯದಲ್ಲಿ ನಡೆಸುತ್ತಿದ್ದ ಸಾಗರ್​ ಕ್ಲಿನಿಕ್​ನಲ್ಲಿ ಮಾಸ್ಕ್​ ಹಾಕಿಕೊಳ್ಳದೇ ಇರೋದು, ಸಾಮಾಜಿಕ ಅಂತರ ಪಾಲನೆ ಮಾಡದಿರೋದು ಸೇರಿದಂತೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದರಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳು ನೋಟಿಸ್​ ನೀಡಿದ್ದರು. ಇದಾದ ಬಳಿಕ ಸಾಗರ್​ ಕ್ಲಿನಿಕ್​ ಬಂದ್​ ಆಗಿತ್ತು.

ಡಾ. ರಾಜು ಕೃಷ್ಣಮೂರ್ತಿ ಟಿವಿ ಸಂದರ್ಶನವೊಂದರಲ್ಲಿ ಹೇಳಿಕೆಯೊಂದನ್ನ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. ಕೊರೊನಾ ಸೋಂಕಿತರಿಗೆ ಮಾಸ್ಕ್​, ಸ್ಯಾನಿಟೈಸರ್​ ಬೇಡ ಎಂದು ಹೇಳಿದ್ದು ಮಾತ್ರವಲ್ಲದೇ ತಾನು ಮಾಸ್ಕ್​ ಧರಿಸದೇ ಟ್ರೀಟ್​ಮೆಂಟ್​ ನೀಡ್ತೇನೆ ಎಂತಲೂ ಹೇಳಿಕೊಂಡಿದ್ದರು.

ಈ ಸಂದರ್ಶನದ ಕ್ಲಿಪ್​ ವೈರಲ್​ ಆಗುತ್ತಿದ್ದಂತೆಯೇ ಕರ್ನಾಟಕ ಮೆಡಿಕಲ್​ ಕೌನ್ಸಿಲ್​ ಇವರನ್ನ ವೈದ್ಯ ವೃತ್ತಿಯಿಂದ ನಿಷೇಧ ಮಾಡಬೇಕು ಎಂದು ಶಿಫಾರಸು ಮಾಡಿತ್ತು. ಅಲ್ಲದೇ ಆರೋಗ್ಯ ಅಧಿಕಾರಿಗಳು ನೋಟಿಸ್​ ನೀಡಿದ ಬಳಿಕ ಮಂಗಳವಾರ ಇವರ ಕ್ಲಿನಿಕ್​ನ್ನು ಬಂದ್​ ಮಾಡಲಾಗಿತ್ತು. ಆದರೆ ಇದರಿಂದ ರೋಗಿಗಳಿಗೆ ಸಮಸ್ಯೆ ಆಗ್ತಿರೋದ್ರ ಹಿನ್ನೆಲೆ ಸ್ಥಳೀಯ ಮಾಜಿ ಕಾರ್ಪೊರೇಟರ್​ ದಾಸೇಗೌಡ ನೇತೃತ್ವದಲ್ಲಿ ಕ್ಲಿನಿಕ್​ ಪುನಾರಂಭ ಮಾಡಲಾಗಿದೆ. ಅಲ್ಲದೇ ರಾಜು ಅವರ ವಿಡಿಯೋಗಳಿಂದ ಮಾನಸಿಕ ನೆಮ್ಮದಿ ಕಂಡುಕೊಂಡಿದ್ದ ಸಾರ್ವಜನಿಕರೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಡಾ. ರಾಜು ಅವರಿಗೆ ದೊಡ್ಡ ಮಟ್ಟದ ಬೆಂಬಲ ನೀಡಿದ್ದರು.


Spread the love

About Laxminews 24x7

Check Also

ಪ್ರಜ್ವಲ್ ರೇವಣ್ಣ ಕೇಸ್ – ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ 13,712 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

Spread the loveಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಪೆನ್‌ಡ್ರೈವ್‌ ಹಂಚಿಕೆ ಸಂಬಂಧ ಎಸ್‌ಐಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ