ಹೈದರಾಬಾದ್: ಸಿನಿಮಾ ಪ್ರೊಡ್ಯೂಸರ್ ಒಬ್ಬ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಪರಿಚಯವಿದ್ದ ಜೂನಿಯರ್ ನಟಿಯನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದನೆಂದು ಆತನನ್ನು ಹೈದರಾಬಾದ್ ನ ಸರೋರ್ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನಾಗಿರುವ ಸಿನಿಮಾ ಪ್ರೊಡ್ಯೂಸರ್, ಸುಧೀರ್ (31) ಎಂದು ಗುರುತಿಸಲಾಗಿದೆ. ಈತ ಕರೊನಾ ಲಾಕ್ಡೌನ್ ಸಮಯದಲ್ಲಿ ಜಾಲತಾಣದಲ್ಲಿ ಮಹಿಳೆಯರ ಅರೆಬೆತ್ತಲೆ ಫೋಟೋ ಹಾಕಿ ದಂಧೆಗೆ ಯುವಕರನ್ನು ಸೆಳೆಯುತ್ತಿದ್ದ ಎಂಬುದು ಗೊತ್ತಾಗಿದೆ.
ಈ ವೇಶ್ಯಾವಾಟಿಕೆ ದಂಧೆ ನಡೆಸಲು ಮಧಪುರ್ ನ ಅಯ್ಯಪ್ಪ ಸೊಸೈಟಿಯಲ್ಲಿ ಮನೆಯೊಂದನ್ನು ಬಾಡಿಗೆ ಪಡೆದಿದ್ದನು. ಲೊಕೆಂಟೋ ಡೇಟಿಂಗ್ ವೆಬ್ ಸೈಟ್ ನಲ್ಲಿ ಹುಡುಗಿಯರ ಅರೆ ಬೆತ್ತಲೆ ಫೋಟೋಗಳನ್ನು ಪೋಸ್ಟ್ ಮಾಡಿ ಯುವಕರನ್ನು ಸೆಳೆಯುತ್ತಿದ್ದನು. ಅವರೊಂದಿಗೆ ಫೋನ್ ಮೂಲಕ ಸಂಪರ್ಕಿಸಿ ವ್ಯವಹಾರ ನಡೆಸುತ್ತಿದ್ದನು. ಈ ಬಗ್ಗೆ ಮಾಹಿತಿ ಪಡೆದುಕೊಂಡ ರಾಚಕೊಂಡ ಮಾನವ ಕಳ್ಳಸಾಗಾಣೆ ವಿರೋಧಿ ಘಟಕ (ಎಎಚ್ ಟಿಯು)ದ ಪೊಲೀಸರು, ಸರೋರ್ ನಗರ ಠಾಣೆಗೆ ತಿಳಿಸಿದ್ದಾರೆ. ಆ ಗ ವಿಷಯ ತಿಳಿದ ಅಲ್ಲಿಯ ಪೊಲೀಸರು ಸುಧೀರ್ ನನ್ನು ಬಂಧಿಸಿದ್ದಾರೆ.
ಸುಧೀರ್ ಖಮ್ಮಮ್ ಜಿಲ್ಲೆಯ ಸತ್ತುಪಲ್ಲಿ ಮೂಲದವರಾಗಿದ್ದು, 10 ವರ್ಷಗಳ ಹಿಂದೆ ಹೈದರಾಬಾದ್ ಗೆ ಬಂದು ಮಧಪುರ್ ನಲ್ಲಿ ನೆಲೆಸಿದ್ದರು. ಸಿನಿಮಾ ಪ್ರೊಡಕ್ಷನ್ನೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವದರಿಂದ ಸಹಜವಾಗಿಯೇ ಕಲಾವಿದರು ಪರಿಚಯವಿರುತ್ತರೆ. ಅದರಲ್ಲಿ ಕೆಲವು ಕಿರಿಯ ಕಲಾವಿದರನ್ನು ಈ ವೇಶ್ಯಾವಾಟಿಕೆಗೆ ದೂಡಿ ಹಣ ಮಾಡಲು ಮುಂದಾಗಿದ್ದನು.
Laxmi News 24×7