ಹರಿಯಾಣ : ಹರಿಯಾಣದ ಹಿಸಾರ್‌ನಲ್ಲೊಂದು ಮನಮಿಡಿಯುವ ಘಟನೆ ನಡೆದಿದೆ. ಕಳೆದ ವರ್ಷ ಕೊರೊನಾ ಶುರುವಾದಾಗಿನಿಂದ ಇಲ್ಲಿಯವರೆಗೆ 300 ಕೊರೊನಾ ಪೀಡಿತರ ಶವದಹನಕ್ಕೆ ನೆರವಾಗಿದ್ದ, ಅಂತಿಮ ಕ್ರಿಯೆಗಳನ್ನು ವಿಧಿವತ್ತಾಗಿ ನಡೆಸಿದ್ದ ಹಿಸಾರ್ ನಗರಪಾಲಿಕೆ ಅಧಿಕಾರಿಯೊಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅದೂ ಸೋಂಕಿದೆ ಎಂದು ಗೊತ್ತಾಗಿ ಎರಡೇ ದಿನಗಳಲ್ಲಿ!
43 ವರ್ಷದ ಪ್ರವೀಣಕುಮಾರ್; ಸೋಮವಾರ ರಾತ್ರಿ ಆಮ್ಲಜನಕ ಪ್ರಮಾಣ ತೀವ್ರ ಇಳಿಕೆಯಾಗಿದ್ದರಿಂದ ಅಸು ನೀ ಗಿ ದ್ದಾ ರೆ. ಅವರನ್ನು ಕಳೆದವರ್ಷ ಶವಸಂಸ್ಕಾರ ತಂಡದ ಮುಖ್ಯಸ್ಥರನ್ನಾಗಿ ಹಿಸಾರ್ ನಗರಪಾಲಿಕೆ ನೇಮಿಸಿತ್ತು.
ಇಲ್ಲಿಯವರೆಗೆ ತಮ್ಮ ಕರ್ತವ್ಯವನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಜನರಿಂದ ಮೆಚ್ಚುಗೆ ಪಡೆದುಕೊಂಡಿದ್ದರು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು!