ಮಲ್ಕಂಗಿರಿ: ಲಾಕ್ಡೌನ್ ನಡುವೆಯೇ ಕೆಲ ದುಷ್ಕರ್ಮಿಗಳು ನೀಚ ಕೃತ್ಯಕ್ಕೆ ಕೈ ಹಾಕಿದ್ದು, ಅಮಾಯಕ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆ ದಂಧೆ ನೂಕಲ ಅವರನ್ನು ಕಳ್ಳಸಾಗಾಣೆ ಮಾಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.
ಹೆಣ್ಣುಮಕ್ಕಳನ್ನು ಒಡಿಶಾದ ಭೈರಾಪುತ್ರ ವಲಯದ ಕುಡುಮುಲುಗುಮ್ಮ ಗ್ರಾಮದಿಂದ ಕದ್ದು ಸಾಗಿಸಲಾಗುತ್ತಿತ್ತು. ಲಾಕ್ಡೌನ್ ಪರಿಶೀಲನೆ ವೇಳೆ ಶುಕ್ರವಾರ ಘಟನೆ ಬೆಳಕಿಗೆ ಬಂದಿದೆ.
ಮಲ್ಕಂಗಿರಿ ತಹಸೀಲ್ದಾರ್ ವಿಜಯ್ ಮಂದಾಂಗಿ ಲಾಕ್ಡೌನ್ ಪರಿಶೀಲನೆ ಮಾಡುವಾಗ ವಾಹನವೊಂದರಲ್ಲಿ ಹೆಣ್ಣು ಮಕ್ಕಳು ಕುಳಿತಿದ್ದನ್ನು ಗಮನಿಸಿದ್ದಾರೆ. ಅವರ ಬಳಿ ಹೋಗಿ ವಿಚಾರಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡದಿದ್ದನ್ನು ನೋಡಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾರೆ.
ಬಳಿಕ ಅವರನ್ನು ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಕರೆದೊಯ್ದು ವಿಚಾರಿಸಿದಾಗ ವಲಸೆ ಕಾರ್ಮಿಕರ ಹೆಸರಲ್ಲಿ ಅವರನ್ನು ಆಂಧ್ರ ಪ್ರದೇಶದಕ್ಕೆ ಕದ್ದು ಸಾಗಿಸುವ ಯತ್ನ ನಡೆದಿತ್ತು ಎಂಬುದು ಬಹಿರಂಗವಾಗಿದೆ.
ಸದ್ಯ ಹೆಣ್ಣು ಮಕ್ಕಳು ಮಲ್ಕಂಗಿರಿ ಮಕ್ಕಳ ಕಲ್ಯಾಣ ಕೇಂದ್ರದಲ್ಲಿದ್ದಾರೆ. ತನಿಖಾ ನಂತರ ಅವರನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Laxmi News 24×7