Breaking News

ಎತ್ತರದ ಕಟ್ಟೆ ಇದ್ದರೂ ಬಾವಿಗೆ ಬಿದ್ದ ಎಮ್ಮೆ- ಸ್ಥಳೀಯರಲ್ಲಿ ಅಚ್ಚರಿ……….

Spread the love

ದಾವಣಗೆರೆ: 80 ಅಡಿ ಆಳದ ಬಾವಿಗೆ ಎಮ್ಮೆಯೊಂದು ಬಿದ್ದಿರುವ ಘಟನೆ ಹರಪ್ಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ನಡೆದಿದೆ.

ಎತ್ತರದ ಕಟ್ಟೆ ಇದ್ದರೂ ಎಮ್ಮೆ ಬಾವಿಗೆ ಬಿದ್ದಿದ್ದು ಹೇಗೆ ಎಂಬ ಅಚ್ಚರಿ ಎಲ್ಲರಲ್ಲೂ ಮೂಡಿದೆ. ಎಮ್ಮೆ, ಕೋಟ್ರೇಶ್ ನಾಯ್ಕ್‍ಗೆ ಸೇರಿದ್ದಾಗಿದ್ದು, ರಾತ್ರಿ ಸಮಯದಲ್ಲಿ ಎರಡು ಎಮ್ಮೆಗಳನ್ನು ಬಾವಿ ಪಕ್ಕದಲ್ಲಿ ಕಟ್ಟಲಾಗಿತ್ತು. ಈ ವೇಳೆ ಎರಡು ಎಮ್ಮೆಗಳು ಕಾದಾಟ ನಡೆಸಿವೆ ಎನ್ನಲಾಗಿದ್ದು, ಬಾವಿ ಕಟ್ಟೆ ಎಗರಿ, ಜಾಲರಿ ಸಮೇತ ಆಳದ ಬಾವಿಗೆ ಎಮ್ಮೆ ಬಿದ್ದಿದೆ ಎಂದು ಹೇಳಲಾಗಿದೆ.

ಅಗ್ನಿಶಾಮಕ ದಳದಿಂದ ರಕ್ಷಣೆ:
ಇನ್ನೂ 80ಅಡಿ ಆಳದಲ್ಲಿ ಎಮ್ಮೆ ಬಿದಿದ್ದು, ತಲೆ ಮೇಲಕ್ಕೆ ಇರಿಸಿ ಎಮ್ಮೆ ಈಜಾಡುತ್ತಾ ಪ್ರಾಣ ಉಳಿಸಿಕೊಂಡಿದೆ. ಸ್ಥಳಕ್ಕೆ ಆಗಮಿಸಿದ ದಾವಣಗೆರೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ಬಸವಪ್ರಭು ಶರ್ಮಾ ನೇತೃತ್ವದಲ್ಲಿ ಬೆಳಗ್ಗೆ 5 ಗಂಟೆಯಿಂದ 9 ಗಂಟೆವರೆಗೂ ಕಾರ್ಯಾಚರಣೆ ನಡೆಸಿ, ರೋಪ್ ಗಳ ಮೂಲಕ ಹರಸಾಹಸ ಪಟ್ಟು ಎಮ್ಮೆಯನ್ನು ರಕ್ಷಣೆ ಮಾಡಲಾಗಿದೆ.


Spread the love

About Laxminews 24x7

Check Also

ದಾವಣಗೆರೆ ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡಗಳಿಗಿಲ್ಲ ಉದ್ಘಾಟನೆ ‘ಭಾಗ್ಯ’

Spread the love ದಾವಣಗೆರೆ: ಇಲ್ಲಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮಹಿಳೆಯರ ಮತ್ತು ಮಕ್ಕಳ ವಿಭಾಗ ಹಾಗೂ ತುರ್ತು ಚಿಕಿತ್ಸಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ