Breaking News

ಹೆಲ್ಮೆಟ್ ಧರಿಸದ ಬೈಕ್​ ಸವಾರನಿಗೆ ದಂಡ ಹಾಕಿದ ಎಸ್​ಐಗೆ ನಡುರಸ್ತೆಯಲ್ಲೇ ಎಸಿ, ತಹಸೀಲ್ದಾರ್ ಅವಾಜ್​! ವಿಡಿಯೋ ವೈರಲ್​

Spread the love

ಮಂಡ್ಯ: ಹೆಲ್ಮೆಟ್​ ಹಾಕದೆ ಬೈಕ್​ನಲ್ಲಿ ಬಂದ ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕಿದ ಸಬ್​ಇನ್​ಸ್ಪೆಕ್ಟರ್​ಗೆ ನಡು ರಸ್ತೆಯಲ್ಲೇ ನಿಂತು ಎಸಿ ಮತ್ತು ತಹಸೀಲ್ದಾರ್ ಅವಾಜ್​ ಹಾಕಿರುವ ವಿಡಿಯೋ ವೈರಲ್​ ಆಗಿದೆ.

ಇನ್ನುಂದೆ ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕದಂತೆ ಪೊಲೀಸರಿಗೆ ಎಸಿ ಶಿವಾನಂದಮೂರ್ತಿ, ತಹಸೀಲ್ದಾರ್ ಕುಂಞ ಅಹಮದ್ ವಾರ್ನಿಗ್​ ಮಾಡಿರುವ ಘಟನೆ ನಾಗಮಂಗಲದಲ್ಲಿ ಸಂಭವಿಸಿದೆ. 

ನಾಗಮಂಗಲ ಟೌನ್ ಪೊಲೀಸ್ ಠಾಣೆ ಎಸ್‌ಐ ರವಿಶಂಕರ್ ನೇತೃತ್ವದ ತಂಡ ವಾಹನ ತಪಾಸಣೆ ಮಾಡುತ್ತಿದ್ದರು, ವೇಳೆ ಕಂದಾಯ ಇಲಾಖೆ ಸಿಬ್ಬಂದಿಯೊಬ್ಬರು ಹೆಲ್ಮೆಟ್ ಹಾಕದೆ ಬೈಕ್​ನಲ್ಲಿ ಬಂದಿದ್ದು, ಬೈಕ್​ ಅನ್ನು ಅಡ್ಡಗಟ್ಟಿದ ಪೊಲೀಸರು ದಂಡ ಹಾಕಿದರು. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಎಸಿ ಮತ್ತು ತಹಸೀಲ್ದಾರ್ ಇಬ್ಬರೂ ಎಸ್‌ಐಗೆ ತರಾಟೆ ತೆಗೆದುಕೊಂಡರು.

‘ನಾನು ಮ್ಯಾಜಿಸ್ಟ್ರೆಟ್ ಹೇಳ್ತಿದ್ದೀನಿ. ಇನ್ಮುಂದೆ ದಂಡ ಹಾಕಬೇಡಿ’ ಎಂದು ಎಸ್​ಐಗೆ ತಹಸೀಲ್ದಾರ್ ವಾರ್ನಿಂಗ್​ ಮಾಡಿದರು, ‘ಇದೇ ಫಸ್ಟ್ ಆಯಂಡ್ ಲಾಸ್ಟ್. ಕಂದಾಯ ಇಲಾಖೆ ಸಿಬ್ಬಂದಿಯನ್ನ ಪರಿಶೀಲನೆ ಮಾಡ್ಬೇಡಿ’ ಎಂದು ಎಸಿ ಎಚ್ಚರಿಸಿದರು.

ಕಾನೂನು ಪಾಲನೆ ಬಗ್ಗೆ ಜಾಗೃತಿ ಮೂಡಿಸಬೇಕಿದ್ದ ಅಧಿಕಾರಿಗಳಿಂದಲೇ ತಪ್ಪು ಮಾಡಿದವನ ಪರ ವಕಾಲತ್ತು ವಹಿಸಿಕೊಳ್ಳಲಾಗಿದೆ. ಎಸ್‌ಐಗೆ ತರಾಟೆ ತೆಗೆದುಕೊಂಡ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸಾಮಾನ್ಯ ಜನರಿಗೊಂದು ಕಾನೂನು, ಕಂದಾಯ ಇಲಾಖೆ ಸಿಬ್ಬಂದಿಗೆ ಮತ್ತೊಂದು ಕಾನೂನು ಇದೆಯಾ? ಎಂದು ಪ್ರಶ್ನಿಸಿದ್ದಾರೆ.


Spread the love

About Laxminews 24x7

Check Also

ಔತಣ ಕೂಟದಲ್ಲಿ ಪಾಲ್ಗೊಂಡು, ಡಿಕೆಶಿಗೆ ಅಭಿನಂದಿಸಿದ ಹೆಬ್ಬಾಳಕರ್, ಹಟ್ಟಿಹೊಳಿ

Spread the loveಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹೊಟೇಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ