Breaking News

ಮಂಗಳವಾರದಿಂದ ಲಾಠಿ ಏಟಿನ ಬದಲಾಗಿ, ಅನಗತ್ಯ ಸಂಚಾರಿಗಳಿಗೆ ದಂಡ ವಿಧಿಸುವುದು ಮತ್ತು ವಾಹನಗಳನ್ನು ವಶಕ್ಕೆ ಪಡೆಯುವುದನ್ನು ವ್ಯಾಪಕ

Spread the love

ರಾಯಚೂರು: ಲಾಕ್‌ಡೌನ್‌ ಜಾರಿ ಬಿಗಿಗೊಳಿಸಿರುವ ಪೊಲೀಸರು ಮಂಗಳವಾರದಿಂದ ಲಾಠಿ ಏಟಿನ ಬದಲಾಗಿ, ಅನಗತ್ಯ ಸಂಚಾರಿಗಳಿಗೆ ದಂಡ ವಿಧಿಸುವುದು ಮತ್ತು ವಾಹನಗಳನ್ನು ವಶಕ್ಕೆ ಪಡೆಯುವುದನ್ನು ವ್ಯಾಪಕಗೊಳಿಸಿದ್ದಾರೆ.

ಕೋವಿಡ್‌-19 ಎರಡನೇ ಅಲೆ ನಿಯಂತ್ರಣ ಕ್ರಮಗಳ ಜಾರಿಯು ಜನವರಿ 1 ರಿಂದ ಆರಂಭವಾಗಿದ್ದು, ಮೇ 10 ರವರೆಗೂ ಒಟ್ಟು 4,322 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮೇ 10 ರಂದು ಒಂದೇ ದಿನ ಮಾಸ್ಕ್ ಧರಿಸದೇ ಇರುವ ಸಾರ್ವಜನಿಕರ ವಿರುದ್ಧ 699 ಪ್ರಕರಣಗಳು , ಸಾಮಾಜಿಕ ಅಂತರ ಉಲ್ಲಂಘನೆ 4 ಪ್ರಕರಣಗಳನ್ನು ದಾಖಲಿಸಿ ಒಟ್ಟು ₹70,300 ದಂಡ ವಿಧಿಸಲಾಗಿದೆ. ಕರ್ನಾಟಕ ಮಹಾಮಾರಿ ಕಾಯ್ದೆ ಅಡಿಯಲ್ಲಿ 4 ಪ್ರಕರಣಗಳನ್ನು ದಾಖಲಿಸಿ ಅನಗತ್ಯ ಸಂಚರಿಸಿದ 643 ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಅನವಶ್ಯಕವಾಗಿ ಸಂಚರಿಸುವ ವಾಹನಗಳನ್ನು ಜಪ್ತ ಮಾಡಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಅಡಿಯಲ್ಲಿ ಪ್ರಕರಣ ದಾಖಲಿಸಲು ತೀರ್ಮಾನಿಸಲಾಗಿದೆ. ಜಪ್ತಿ ಮಾಡಿದ ವಾಹನವನ್ನು ನ್ಯಾಯಾಲಯ ಮುಖಾಂತರ ಬಿಡುಗಡೆ ಮಾಡಿಕೊಳ್ಳಬೇಕಾಗುವುದಲ್ಲದೇ , ಸಾರ್ವಜನಿಕರ ವಿರುದ್ಧ ದಾಖಲಾದ ಪ್ರಕರಣವು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು , ಸುಧೀರ್ಘ ಕಾನೂನು ಹೋರಾಟ ನಡೆಸಿ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕಾತ್ತದೆ. ಸಾರ್ವಜನಿಕರು ಜಾಗೃತಿ ವಹಿಸಲು ಮತ್ತು ಕೋವಿಡ್ -19 ನಿಯಂತ್ರಣ ಕುರಿತು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್ -19 ನಿಯಂತ್ರಣಕ್ಕಾಗಿ ಜನವರಿ 1 ರಿಂದ ಏಪ್ರಿಲ್‌ 21 ರ ಅವಧಿಯಲ್ಲಿ ಮಾಸ್ಕ್ ಧರಿಸದೇ ಇರುವ ಸಾರ್ವಜನಿಕರ ವಿರುದ್ಧ 7541 ಪ್ರಕರಣಗಳನ್ನು ದಾಖಲಿಸಿ ₹8,64,950 ದಂಡ ವಿಧಿಸಲಾಗಿತ್ತು. ಏಪ್ರಿಲ್‌ 22 ರಿಂದ ಮೇ 9 ಜನತಾ ಕರ್ಫ್ಯೂ ಅವಧಿಯಲ್ಲಿ ಮಾಸ್ಕ್ ಧರಿಸದೇ ಇರುವ ಸಾರ್ವಜನಿಕರ ವಿರುದ್ಧ 8,004 ಪ್ರಕರಣಗಳನ್ನು ದಾಖಲಿಸಿ ₹8,24,250 ದಂಡ ವಿಧಿಸಲಾಗಿದೆ. ಅನಾವಶ್ಯಕವಾಗಿ ಸಂಚರಿಸಿದ ವಾಹನ ಸವಾರರ 3,200 – ದ್ವಿಚಕ್ರ ವಾಹನಗಳು , 351 – ನಾಲ್ಕು ಚಕ್ರ ವಾಹನಗಳು ಮತ್ತು 128 – ಇತರೇ ವಾಹನಗಳು ಸೇರಿ ಒಟ್ಟು 3679 ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಕರ್ನಾಟಕ ಮಹಾಮಾರಿ ಕಾಯ್ದೆ ಅಡಿ 108 ಪ್ರಕರಣಗಳನ್ನು ದಾಖಲಿಸಿದ್ದು , ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ3 ಪ್ರಕರಣಗಳನ್ನು ದಾಖಲಿಸಲಾಗಿದೆ. ಸಾಮಾಜಿಕ ಉಲ್ಲಂಘನೆ ಮಾಡಿದ ಸಾರ್ವಜನಿಕರ ವಿರುದ್ಧ 23 ಪ್ರಕರಣಗಳನ್ನು ದಾಖಲಿಸಿದ್ದು, ಕೋವಿಡ್ -19 ನಿಯಮಾವಳಿ ಉಲ್ಲಂಘಿಸಿ ಹೆಚ್ಚಿನ ಪ್ರಮಾಣದಲ್ಲಿ ಒಂದೆಡೆ ಸೇರಿದ ಸಾರ್ವಜನಿಕರ ವಿರುದ್ಧ 23 ಪ್ರಕರಣಗಳನ್ನು ದಾಖಲಿಸಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಉಗುಳಿದ ಸಾರ್ವಜನಿಕರ ವಿರುದ್ಧ 610 ಪ್ರಕರಣಗಳನ್ನು ದಾಖಲಿಸಿದ್ದು , ಸಾರ್ವಜನಿಕರ ಸ್ಥಳದಲ್ಲಿ ಮಧ್ಯಪಾನ , ಗುಟಕಾ, ತಂಬಾಕು ಉತ್ಪನ್ನಗಳ ಸೇವನೆ ಮಾಡಿದ ಸಾರ್ವಜನಿಕರ ವಿರುದ್ಧ ಕೋಟ್ಟಾ ಕಾಯ್ದೆ ಅಡಿಯಲ್ಲಿ 608 ಪ್ರಕರಣಗಳನ್ನು ದಾಖಲಿಸಿ ಸ್ಥಳದಲ್ಲಿಯೇ ದಂಡ ವಿಧಿಸಲಾಗಿದೆ.


Spread the love

About Laxminews 24x7

Check Also

ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಶಿಶುಗಳ ಅದಲು ಬದಲಾದ ಆರೋಪ ಕೇಳಿಬಂದಿದೆ.

Spread the loveರಾಯಚೂರು : ಜಿಲ್ಲೆಯ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರದಂದು ಇಬ್ಬರು ಮಹಿಳೆಯರಿಗೆ ಹೆರಿಗೆಯಾಗಿದ್ದು, ಇವೆರಡು ಮಕ್ಕಳನ್ನು ಸಿಬ್ಬಂದಿ ಅದಲು-ಬದಲು ಮಾಡಿದ್ದಾರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ